Advertisement

ಛಾಯಾಗ್ರಾಹಕರ ಸಮಸ್ಯೆಗೆ ಸ್ಪಂದನೆ: ರವಿಶಂಕರ್‌ 

12:07 PM Aug 21, 2017 | |

ಎಚ್‌.ಡಿ.ಕೋಟೆ: ತಾಲೂಕು ಛಾಯಾಗ್ರಾಹಕರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ರಾಜ್ಯದಲ್ಲೇ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್‌.ರವಿಶಂಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ತಾಲೂಕು ಛಾಯಾಗ್ರಾಹಕರ ಸಂಘ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Advertisement

ತಾಲೂಕು ಛಾಯಾಗ್ರಾಹಕ ಸಂಘ 2003 ರಿಂದ ಆರಂಭವಾಗಿ ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಜೊತೆಗೆ ಸಂಘದ ಸದಸ್ಯರ ಭದ್ರತೆಗಾಗಿ ತಾವೇ ಹಣಕಾಸು ಸಹಕಾರ ವ್ಯವಸ್ಥೆ ಮಾಡಿಕೊಂಡಿದ್ದು, ಇದರಿಂದ ಕಷ್ಟದಲ್ಲಿರುವ ಸಂಘದ ಸದಸ್ಯರಿಗೆ ಅನುಕೂಲ ಆಗುವುದರ ಜೊತೆಗೆ ಸಂಘವೂ ಆರ್ಥಿಕವಾಗಿ ಸದೃಢವಾಗುತ್ತಿದೆ ಎಂದು ತಿಳಿಸಿದರು. 

ಛಾಯಾಚಿತ್ರ ಪ್ರದರ್ಶನ: ವಿಶ್ವ ಛಾಯಾಗ್ರಹಣ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಛಾಯಾಗ್ರಾಹಕ ಸಂಘ ಸದಸ್ಯರಿಗಾಗಿ ವಾತ್ಸಲ್ಯ ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಿತ್ತು. ಮೈಸೂರು ಜಿಪಂ ಅಧ್ಯಕ್ಷೆ ನಯೀಮಾಸುಲ್ತಾನ್‌ ಪ್ರದರ್ಶನಕ್ಕೆ ಚಾಲನೆ ನೀಡಿ ಚಿತ್ರಗಳನ್ನು ವೀಕ್ಷಿಸಿದರು. ಇವುಗಳಲ್ಲಿ ಮೊದಲ 3 ಅತ್ಯುತ್ತಮ ಚಿತ್ರಗಳನ್ನು ತೆಗೆದ ಛಾಯಾಗ್ರಾಹಕರಿಗೆ ನಗದು ಬಹುಮಾನ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಬಹುಮಾನ ವಿತರಣೆ: ಸಂಘವು ನಡೆಸಿದ್ದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಘದ ಸದಸ್ಯರಾಗಿರುವ 5 ನವದಂಪತಿಗಳಿಗೆ ಸಂಘದ ಕಡೆಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಾಧಕರಿಗೆ ಸನ್ಮಾನ: ತಾಲೂಕಿನ ಹಳೆ ಹೆಗ್ಗೂಡಿಲು ಗ್ರಾಮದ ಯೋಧ ರಾಜೇಶ್‌ ಮತ್ತು ತಾಲೂಕಿನ ಹಿರಿಯ ರೈತ ಕಲ್ಲಹಳ್ಳಿ ರಾಚಪ್ಪ ಹಾಗೂ ಸಂಘದ ಹಿರಿಯ 5 ಛಾಯಾಗ್ರಾಹಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್‌, ಪರಿಸರವಾದಿ ಸಾಹಿತಿ ಕ್ಷೀರಸಾಗರ್‌, ಸಂತೆ ಸರಗೂರು ಎಪಿಎಂಸಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ವನ್ಯಜೀವಿ ಛಾಯಾಗ್ರಾಹಕ ಜಿ.ಎನ್‌.ರವಿಶಂಕರ್‌, ಮೈಸೂರು ಕ್ಯಾಪಿಟಲ್‌ ಕಲರ್‌ ಲ್ಯಾಬ್‌ ಮಾಲಿಕ ಶಿವಕುಮಾರ್‌, ಮೈಸೂರು ಫೋಟೋ ಪ್ಯಾಲೇಸ್‌ ಮಾಲಿಕ ಶ್ರೀನಿಧಿ, ಮಹದೇವಸ್ವಾಮಿ, ಸೋಮಸುಂದರ್‌, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರವಿ ಮಟಕೆರೆ, ಸದಸ್ಯರಾದ ಸ್ಟುಡಿಯೋ ಪ್ರಕಾಶ್‌, ವಾಸುಕಿ ನಾಗೇಶ್‌, ನಂದಕುಮಾರ್‌, ವನಸಿರಿ ಶಂಕರ್‌, ಸುರೇಶ್‌, ಗುರುನಾಯಕ್‌, ಕೆಂಡಗಣ್ಣಪ್ಪ, ಮನೋಜ್‌, ಸ್ವಾಮಿನಾಯ್ಕ, ಸಮೀರ್‌, ವೆಂಕಿ, ನಾಗುಸಾಗರ್‌ ಮತ್ತಿತರರಿದ್ದರು.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಮುಂದಿನ ವರ್ಷದ ದಿನಾಚರಣೆಯಲ್ಲಿ ನಡೆಯುವ ಛಾಯಾಚಿತ್ರ ಪ್ರದರ್ಶನದಲ್ಲಿ ವಿಜೇತರಾದ ಮೊದಲ 3 ಬಹುಮಾನಗಳನ್ನು ನಾನೇ ಕೋಡುತ್ತೇನೆ. 
-ಜಿ.ಎಸ್‌.ರವಿಶಂಕರ್‌, ವನ್ಯಜೀವಿ ಛಾಯಾಗ್ರಾಹಕರು 

Advertisement

Udayavani is now on Telegram. Click here to join our channel and stay updated with the latest news.

Next