Advertisement
ಈ ಸಂಬಂಧ ಪ್ರತ್ಯೇಕ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಮಾನಸಿಕ ಅನಾರೋಗ್ಯ ದಿಂದ ಬಳಲುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಲಭ್ಯ ಕಲ್ಪಿಸಬೇಕು. ದೈಹಿಕವಾಗಿ ಅಥವಾ ಟೆಲಿ ಸಮಾಲೋಚನೆ ಮೂಲಕ ಮನೋರೋಗ ತಜ್ಞರು ಅವರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಇಲಾಖೆ ಸೂಚಿಸಿದೆ.
Related Articles
Advertisement
ಗುಣಮುಖ ಪ್ರಮಾಣ ಶೇ.91.68ಕ್ಕೇರಿಕೆದೇಶದಲ್ಲಿ ಭಾನುವಾರ ಬೆಳಗ್ಗೆ 8ರಿಂದ ಸೋಮವಾರ ಬೆಳಗ್ಗೆ 8ರವರೆಗೆ 45,231 ಮಂದಿಗೆ ಸೋಂಕು ದೃಢಪಟ್ಟು, 496 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 82 ಲಕ್ಷ ದಾಟಿದೆ. ಆದರೆ, ಈ ಪೈಕಿ 75 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.91.68ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ ಮರಣ ಪ್ರಮಾಣ ಶೇ.1.49ರಷ್ಟಿದೆ. ಸೋಂಕು ಹೆಚ್ಚಲು ಹಬ್ಬಗಳೇ ಕಾರಣ
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದ್ದು, ಪ್ರಕರಣಗಳು ಹೆಚ್ಚಲು ಹಬ್ಬಗಳೇ ಕಾರಣ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಹಬ್ಬಗಳ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಳ ಹಾಗೂ ಸುರಕ್ಷಾ ಕ್ರಮಗಳ ಪಾಲನೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಜತೆಗೆ, ಮೆಟ್ರೋ ಸಂಚಾರದ ವೇಳೆ ಮಾರ್ಗಸೂಚಿ ಪಾಲನೆಯಾಗುವಂತೆ ಎಚ್ಚರ ವಹಿಸಿ ಎಂದು ಸೂಚಿಸಲಾಗಿದೆ. ಜರ್ಮನಿಯಲ್ಲೂ ಲಾಕ್‌ಡೌನ್
ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಮತ್ತೆ ಲಾಕ್‌ಡೌನ್‌ನ ಮೊರೆ ಹೋಗುತ್ತಿವೆ. ಐರೋಪ್ಯ ರಾಷ್ಟ್ರಗಳ ಪೈಕಿ ಜರ್ಮನಿಯೂ ಸೋಮವಾರದಿಂದ ಭಾಗಶಃ ಲಾಕ್‌ಡೌನ್ ಘೋಷಿಸಿದೆ. ರೆಸ್ಟಾರೆಂಟ್, ಬಾರ್, ಥಿಯೇಟರ್, ಜಿಮ್ ಮತ್ತಿತರ ಚಟುವಟಿಕೆಗಳಿಗೆ 4 ವಾರಗಳ ಕಾಲ ನಿಷೇಧ ಹೇರಲಾಗಿದೆ. ಕಳೆದ 2 ವಾರಗಳಲ್ಲಿ ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ಒಂದಾಗಿ ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕಲೇಬೇಕಿದೆ ಎಂದು ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಹೇಳಿದ್ದಾರೆ. ಗುರುವಾರದಿಂದ ಯುಕೆಯಲ್ಲೂ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಆಸ್ಟ್ರಿಯಾ ಕೂಡ ಈ ವಾರದಲ್ಲೇ ಹೊಸ ನಿರ್ಬಂಧ ಹೇರಲು ಚಿಂತನೆ ನಡೆಸಿದೆ. ಕೊರೊನಾ ಟೆಸ್ಟ್‌ಗೆ ಸಹಕರಿಸದಿದ್ರೆ?
ಗಂಟಲು ದ್ರವ ಪರೀಕ್ಷೆ, ಕೊರೊನಾ ಸಂಬಂಧಿತ ಇತರ ಪರೀಕ್ಷೆಗೆ ಕೆಲವು ಮಾನಸಿಕ ರೋಗಿಗಳು ಸಹಕರಿಸದಿರುವ ಸಾಧ್ಯತೆಯಿದೆ.
ಸೂಕ್ತ ಪರೀಕ್ಷೆಗಳು ವಿಳಂಬವಾಗಲೂ ಬಹುದು. ಇಂಥ ವೇಳೆ ನಿದ್ರಾಜನಕ ನೀಡಬೇಕಾದ ಅವಶ್ಯಕತೆ ಬೀಳಬಹುದು ಎಂದೂ ಮಾರ್ಗಸೂಚಿ ತಿಳಿಸಿದೆ.