ನ್ಯೂಯಾರ್ಕ್: ಅಮೆರಿಕದ ವಿಜ್ಞಾನಿಗಳು, ಡೈನೋಸಾರ್‌ಗಳೂ ಉಸಿರಾಟದ ಸೋಂಕು ಎದುರಿಸಿದ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
15 ಕೋಟಿ ವರ್ಷಗಳ ಹಿಂದಿನ ಡೈನೋಸಾರ್ ಒಂದರ ಪಳೆಯುಳಿಕೆಗಳನ್ನು, ಮೊಂಟಾನ ದಲ್ಲಿರುವ ಮಾಲ್ಟಾ ಡೈನೋಸಾರ್ ಅವಶೇಷಗಳ ಸಂಗ್ರಹಾಗಾರದ ವಿಜ್ಞಾನಿ ಡಾ| ಕ್ಯಾರಿ ವುಡ್‌ರಫ್ ಪರೀಕ್ಷಿಸುತ್ತಿದ್ದರು.
ಈ ವೇಳೆ ಅವರಿಗೆ ಅದರ ಕತ್ತಿನಲ್ಲಿ ವಿಚಿತ್ರ ಲಕ್ಷಣಗಳು ಕಂಡುಬಂದಿವೆ. ಅದನ್ನು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದಾಗ ಹಲವು ವಿಜ್ಞಾನಿಗಳು ಸ್ಪಂದಿಸಿದ್ದಾರೆ.
ಇದನ್ನೂ ಓದಿ:ಮೋದಿ, ನಿತೀಶ್ ಕುಮಾರ್ಗೂ ಮಕ್ಕಳಾಗಲಿ ಎಂದು ದೇವರಲ್ಲಿ ಪಾರ್ಥಿಸುವೆ; ಲಾಲೂ ಪ್ರಸಾದ್ ಕಿಡಿ
ಆ ವಿಜ್ಞಾನಿಗಳು ಆ ಡೈನೋಸಾರ್ ಉಸಿರಾಟದ ಸೋಂಕು ಅನು ಭವಿಸಿದ್ದ ಲಕ್ಷಣಗಳನ್ನು ಗಮ ನಿಸಿದ್ದಾರೆ. ಈಗಿನ ಕಾಲದಲ್ಲಿ ಪಕ್ಷಿಗಳಿಗೆ ಬರುವಂತಹದ್ದೇ ಸಮಸ್ಯೆಗಳು ಅಲ್ಲೂ ಇದ್ದವು. ಹಾಗೆಯೇ ಈಗಿನ ವಯಸ್ಸಾದ ವ್ಯಕ್ತಿಗಳಲ್ಲಿ ಕಾಣುವ ಜ್ವರ, ಕೆಮ್ಮು, ಕಫದಂತಹ ಸಮಸ್ಯೆಗಳು ಆ ಡೈನೋಸಾರ್‌ನಲ್ಲೂ ಇದ್ದಿರುವ ಎಲ್ಲ ಲಕ್ಷಣಗಳನ್ನು ಪತ್ತೆ ಹಚ್ಚಿದ್ದಾರೆ. ಇದರಿಂದ ಸ್ವತಃ ವುಡ್‌ರಫ್ ಚಕಿತರಾಗಿದ್ದಾರೆ. ವಿಶೇಷವೆಂದರೆ ಈ ಡೈನೋಸಾರ್‌ನ ಅವಶೇಷಗಳು ಪತ್ತೆಯಾಗಿದ್ದು ಕೇವಲ 30 ವರ್ಷಗಳ ಹಿಂದೆ.