Advertisement

ಸಾಧಕರಿಗೆ ಗೌರವಿಸುವುದು ಸೇವೆಗೆ ಸ್ಪೂರ್ತಿ ನೀಡಿದಂತೆ

02:28 PM Dec 14, 2021 | Team Udayavani |

 

Advertisement

ಹುಣಸಗಿ: ಸಾಧಕರಿಗೆ ಪ್ರಶಸ್ತಿ ವಿತರಿಸಿ ಗೌರವಿಸುವುದರಿಂದ ಸಮಾಜದಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ಹಾಗೂ ಜೀವನಕ್ಕೆ ಸ್ಫೂರ್ತಿ ಸಿಗುತ್ತದೆ ಎಂದು ಶಾಸಕ ನರಸಿಂಹನಾಯಕ(ರಾಜುಗೌಡ) ಹೇಳಿದರು.

ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಗುರುಪಾದ ಶಿವರಣರ 11ನೇ ವರ್ಷದ ಪುಣ್ಯಸ್ಮರಣೆ ಹಾಗೂ ನಾಲ್ಕನೇ ವರ್ಷದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಠದಲ್ಲಿ ಆಚಾರ-ವಿಚಾರ, ಧಾರ್ಮಿಕ ಪರಂಪರೆ ಉಳಿಸಿಕೊಂಡು, ಸಂಸ್ಕೃತಿ ವೃದ್ಧಿ ಜತೆಗೆ ಭಕ್ತರಿಗೆ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಹೀಗಾಗಿ ಮಠವು ಭಕ್ತರ ಶ್ರೇಯೋಭಿವೃದ್ಧಿಗಾಗಿ ಸಾಮಾಜಿಕ ಕಾರ್ಯಗಳನ್ನು ಹೀಗೆಯೇ ಮುಂದುವರಿಸಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಯ್ಯಣ್ಣಸ್ವಾಮಿ ಹಿರೇಮಠ, ನಂದಕುಮಾರ ಪೂಜಾರಿ ಅವರಿಗೆ ಬಸವಲಿಂಗ ಸೇವಾ ಭೂಷಣ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.

Advertisement

ಪ್ರಭುಲಿಂಗ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮರಿಹುಚ್ಚೇಶ್ವರ ಮಹಾಸ್ವಾಮಿ, ಶಿವಯೋಗಿ ದೇವರು, ಚಂದ್ರಶೇಖರ ದೇವರು, ದಾವಲಮಲಿಕ್‌ ಮುತ್ಯಾ, ಕರಣಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಿದ್ದಲಿಂಗಯ್ಯ ಶಾಸ್ತ್ರಿ ನೇತೃತ್ವ ವಹಿಸಿದ್ದರು. ಈ ವೇಳೆ ಮುಖಂಡರಾದ ಎಚ್‌ .ಸಿ.ಪಾಟೀಲ, ಯಲ್ಲಪ್ಪ ಕುರಕುಂದಿ, ಬಸನಗೌಡ.ಎಂ. ಅಳ್ಳಿಕೋಟಿ, ನಾಗಯ್ಯಸ್ವಾಮಿ ದೇಸಾಯಿ ಗುರು, ಸಿದ್ದನಗೌಡ ಕರಿಭಾವಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next