Advertisement
ಇಂಗ್ಲೆಂಡ್‌ನ ಪ್ರತಿಷ್ಠಿತ ಎನ್‌ಕ್ಯುಎ ಸಂಸ್ಥೆಯ ಮೂಲಕ ಯೋಜನೆಯು ಪ್ರತಿಷ್ಠಿತ ಅಂತಾ ರಾಷ್ಟ್ರೀಯ ಐಎಸ್‌ಒ-27001 ದೃಢೀಕರಣ ಮಾನ್ಯತೆಯನ್ನು ಪಡೆದು ಕೊಂಡಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
Related Articles
Advertisement
ಐಎಸ್‌ಒ-27001 ದೃಢೀಕರಣ ಮಾನ್ಯತೆಯನ್ನು ಪ್ರದಾನ ಮಾಡಿದ ಇಂಗ್ಲೆಂಡ್‌ನ ಎನ್‌ಕುÂಎ ಸಂಸ್ಥೆಯ ಬೆಂಗಳೂರಿನ ಕೇಂದ್ರ ಕಚೇರಿಯ ಮಹಾಪ್ರಬಂಧಕ ಸಿ.ಕೆ. ಅಮರ್‌ದೀಪ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಸೇವಾಸಂಸ್ಥೆಗೆ ಈ ಮಾನ್ಯತೆಯನ್ನು ನೀಡಲು ಸಂತೋಷವಾಗುತ್ತಿದೆ. ಒಂದು ಸೇವಾ ಸಂಸ್ಥೆಯು ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಮೀಣ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಮತ್ತಷ್ಟು ಉತ್ತಮ ಕೆಲಸವನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಯೋಜನೆಯು ಡಾ| ಹೆಗ್ಗಡೆ ಯವರು ಮಾರ್ಗದರ್ಶನದಲ್ಲಿ ತನ್ನ ವ್ಯವಸ್ಥೆ ಗಳನ್ನು ಪಾರದರ್ಶಕವಾಗಿ ರೂಪಿಸಿಕೊಳ್ಳಲು ಬೇಕಾಗುವ ಎಲ್ಲ ಮಾನ ದಂಡಗಳನ್ನು ಅಳವಡಿಸಿ ಕೊಂಡು ಐಎಸ್‌ಒ-27001 ದೃಢೀ ಕರಣ ಮಾನ್ಯತೆ ಪಡೆದು ಕೊಂಡಿ ರುವುದು ದಾಖಲಾರ್ಹ ವಿಷಯ. ಯೋಜನೆಯು ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಸೃಷ್ಟಿಸಿದೆ. ಸ್ವಸಹಾಯ ಸಂಘ ಗಳ ಸದಸ್ಯರ ದಾಖಲೀ ಕರಣ ಮಾಡುವಲ್ಲಿ ಯೋಜನೆಯು ದೇಶದಲ್ಲಿಯೇ ಅತ್ಯುನ್ನತ ಗುಣಮಟ್ಟದ ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರಿಂದಾಗಿ ಸ್ವಸಹಾಯ ಸಂಘದ ಯಾವುದೇ ಸದಸ್ಯರು ಯಾವುದೇ ಆರ್ಥಿಕ ವ್ಯವಹಾರ ವನ್ನು ನಡೆಸಿದರೂ ಅದನ್ನು ದಾಖಲೀಕರಣ ಮಾಡಿ ಸಂಬಂ ಧಿಸಿದ ಬ್ಯಾಂಕ್‌ಗಳಿಗೆ ಮತ್ತು ಸಂಬಂಧಿಸಿದ ಸದಸ್ಯರಿಗೆ ತಲುಪಿಸುವ ವ್ಯವಸ್ಥೆ ಯನ್ನು ಮಾಡಲಾಗಿದೆ. ಸುಮಾರು 55 ಲಕ್ಷ ಸದಸ್ಯರಿಗೆ ಬ್ಯಾಂಕ್, ವಿಮಾ ಸೌಲಭ್ಯಗಳನ್ನು, ಸರಕಾರಿ ಯೋಜನೆಗಳನ್ನು ನೇರವಾಗಿ ಗ್ರಾಮಾಭಿವೃದ್ಧಿ ಯೋಜನೆ ತಲುಪಿಸುತ್ತಿದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದರು.
ಯೋಜನೆಯ ಟ್ರಸ್ಟಿ ಹೇಮಾವತಿ ವೀ. ಹೆಗ್ಗಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಮಾನಸ ಕನ್ಸಲ್ಟೆನ್ಸಿ ಮುಖ್ಯಸ್ಥ ಭಾರ್ಗವ್, ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಪೈ ಉಪಸ್ಥಿತರಿದ್ದರು.ಯೋಜನೆಯ ನಿರ್ದೇಶಕರಾದ ರಾಜೇಶ್ ಶೆಟ್ಟಿ ಮತ್ತು ಸುರೇಶ್ ಮೊಲಿ ಕಾರ್ಯಕ್ರಮ ನಿರೂಪಿಸಿದರು.