Advertisement

ಮಾತೃಭಾಷೆಗೆ ಗೌರವ ಸಲ್ಲಿಸಿ: ಬೆಳ್ಳಿ ಪ್ರಕಾಶ್‌

06:51 PM Nov 02, 2020 | Suhan S |

ಕಡೂರು: ಮಾತೃಭಾಷೆಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.

Advertisement

ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನ್ಮ ಕೊಟ್ಟ ತಾಯಿಯನ್ನು ಮರೆಯಬಾರದು. ಹಾಗೆಯೇ ನೆಲೆ ನೀಡಿದ ಭೂಮಿಯನ್ನೂ ಮರೆಯಬಾರದು. ಈ ಎರಡೂ ಸದಾ ಗೌರವಿಸಲ್ಪಡುವ, ಆದರಿಸಲ್ಪಡುವ ಹಾಗೂ ಸ್ಮರಣೆಗೆಅರ್ಹವಾಗಿರುವ ಸಂಗತಿಗಳು ಎಂದು ಸೂಚ್ಯವಾಗಿ ತಿಳಿಸಿದರು.

ಕನ್ನಡ ಮತ್ತು ಕನ್ನಡತನ ನಮ್ಮಲ್ಲಿ ಬೆಳೆಯಲು ಜತೆಗೆ ಕನ್ನಡ ನಾಡನ್ನು ಸದೃಢವಾಗಿ ಕಟ್ಟಲುಶ್ರಮಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು. ಪರಭಾಷಿಗರಿಗೆ ಕನ್ನಡ ನೆಲದಲ್ಲಿ ಹೃದಯ ಶ್ರೀಮಂತಿಕೆ ದೊರಕುತ್ತಿದೆ. ಕನ್ನಡಿಗರ ವಿಶಾಲ ಹೃದಯದ ಮನಸ್ಸುಬಹುದೊಡ್ಡ ಸ್ಥಾನ ಪಡೆದಿದೆ ಎಂದು ಹೇಳಿದರು.

ರಾಷ್ಟ್ರ ದ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್‌ ಡಾ| ಕಾಂತರಾಜ್‌ ಮಾತನಾಡಿ, ಕೋವಿಡ್‌ ಕರಿನೆರಳಿನಲ್ಲೂ, ಉತ್ತರ ಕರ್ನಾಟಕದಲ್ಲಿ ಕಾಡುತ್ತಿರುವ ಜಲಪ್ರಳಯ ಸಂದರ್ಭದಲ್ಲಿಯೂ ಮಾತೃ ಭಾಷೆಗೆ ಧಕ್ಕೆಯಾಗದಂತೆ ಕನ್ನಡಿಗರು ನಾಡು- ನುಡಿಯನ್ನು ಉಳಿಸಿ ಬೆಳೆಸಲು ಸದಾ ಸಿದ್ಧರಾಗಿದ್ದಾರೆ ಎಂದರು. ಜಿ.ಪಂ. ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌ ಮಾತನಾಡಿ, ಭಾಷೆ ಜೀವನ ಮೌಲ್ಯಗಳನ್ನು ರೂಪಿಸುತ್ತದೆ. ಯಾವುದೇ ಬಾಷೆ ತನ್ನ ಅಸ್ತಿತ್ವವನ್ನುಕಳೆದುಕೊಂಡಾಗ ನಾಗರಿಕತೆಯೇ ನಾಶವಾಗುತ್ತದೆ. ಇದಕ್ಕೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳ ಉದಾಹರಣೆ ನೀಡಬಹುದಾಗಿದೆ ಎಂದರು.

Advertisement

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ 11 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಲ್ಲಿ ಚುಟುಕುಸಾಹಿತಿ ಬಿಳಿಗಿರಿ ವಿಜಯಕುಮಾರ್‌, ಶಿಕ್ಷಕ ಎಸ್‌. ರಾಮನಾಯ್ಕ, ಜಿ.ರೇವಣ್ಣ, ಕಲ್ಲೇಶಪ್ಪ, ಕರಿನಹಳ್ಳಿ ಶೀಲಾನಂಜುಂಡಪ್ಪ ಮತ್ತಿತರರಿಗೆ ನೀಡಲಾಯಿತು. ತಾಪಂ ಅಧ್ಯಕ್ಷೆ ಪ್ರೇಮಾಬಾಯಿ, ತಾಪಂ ಇಒ ಡಾ| ದೇವರಾಜ ನಾಯ್ಕ, ವೃತ್ತ ನಿರೀಕ್ಷಕ ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಂಗನಾಥಸ್ವಾಮಿ ಮತ್ತು ರಾಜಕುಮಾರ್‌, ಕಾರ್ಮಿಕ ಇಲಾಖೆಯ ಅಧಿಕಾರಿ ಶಶಿಕಲಾ, ಪಿಎಸ್‌ಐ ವಿಶ್ವನಾಥ್‌, ಲೋಕೋಪಯೋಗಿ ಇಂಜಿನಿಯರ್‌ ದಯಾನಂದ್‌, ಮುಖ್ಯಾಧಿಕಾರಿ ಮಂಜುನಾಥ್‌, ಸಿಡಿಪಿಒ ಆಶಾ, ತಾಲೂಕು ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ವೈ.ಎಸ್‌. ರವಿಪ್ರಕಾಶ್‌, ಸೂರಿ ಶ್ರೀನಿವಾಸ್‌, ಟಿ.ಆರ್‌. ಲಕ್ಕಪ್ಪ, ಪಿಕಾರ್ಡ್‌ ಬ್ಯಾಂಕಿನ ಅಧ್ಯಕ್ಷ ರೇವಣ್ಣಯ್ಯ, ನೌಕರ ಸಂಘದ ಅಧ್ಯಕ್ಷ ಬಸವರಾಜು,ಮಲ್ಲಿಕಾರ್ಜುನ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next