Advertisement

ಎಲ್ಲರ ಭಾವನೆಗಳನ್ನು ಗೌರವಿಸಿ: ಸುಕುಮಾರ್‌ ರಾವ್‌  

03:45 AM Jul 08, 2017 | Team Udayavani |

ಕಾರ್ಕಳ: ಎಲ್ಲರ ಭಾವನೆಗಳನ್ನು ಗೌರವಿಸಿ, ಇತರರ ಭಾವನೆಗಳಿಗೆ ಧಕ್ಕೆಯಾಗದಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಮೌಲ್ಯಯುತವಾದ ಜೀವನದ ರೂವಾರಿಗಳು ನಾವಾಗಬೇಕು ಎಂದು ಕೆನರಾಬ್ಯಾಂಕ್‌ನ ಕಾರ್ಕಳ ಶಾಖೆಯ ಮುಖ್ಯ ಪ್ರಬಂಧಕ ಸುಕುಮಾರ್‌ ರಾವ್‌ ಅವರು ಹೇಳಿದರು.

Advertisement

ಅವರು  ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಜೂ. 23 ರಂದು ಜರುಗಿದ ಕೆನರಾ ಬ್ಯಾಂಕ್‌ ಜುಬಿಲಿ ಎಜುಕೇಶನ್‌ ಫಂಡ್‌ ದಿ.ನ್ಯಾಯಮೂರ್ತಿ ಅಮ್ಮೆಂಬಳ ನಾರಾಯಣ ಪೈ ಸ್ಮರಣಾರ್ಥ ಗ್ರಾಮಾಂತರ ಪ್ರದೇಶದ ಆಯ್ದ ಹತ್ತು ಪ್ರೌಢಶಾಲೆಗಳಲ್ಲಿ 2016-17ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗುರುತಿಸಿ, ಪ್ರತಿಭಾ ಪುರಸ್ಕಾರವನ್ನು ನೀಡುವ ಕಾರ್ಯಕ್ರಮದ ಭಾಗವಹಿಸಿ, ಪ್ರತಿಭಾನ್ವಿತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್‌ ಎಂ ಕೊಡವೂರು ಅವರು  ಅಧ್ಯಕ್ಷತೆ ವಹಿಸಿದ್ದರು.ಕೆನರಾಬ್ಯಾಂಕ್‌ ಕುಕ್ಕುಂದೂರು ಶಾಖೆಯ ಪ್ರಬಂಧಕ ಶ್ರೀಕಾಂತ್‌ ಸಹಶಿಕ್ಷಕಿ ಕುಮಾರಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ  ಉಷಾ ರಾವ್‌ ಯು. ಅವರು ಸ್ವಾಗತಿಸಿದರು. ಕಟಪಾಡಿಯ ನಿವೃತ್ತ ಪ್ರಾಂಶುಪಾಲೆ ಎ.ಲಕ್ಷಿ ¾¾à ಬಾಯಿ ಅವರು  ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next