Advertisement

ಕೋವಿಡ್ ನಡುವೆಯೂ ರೆಸಾರ್ಟ್ ಆರಂಭ: ಪ್ರವಾಸಿಗರನ್ನು ರೆಸಾರ್ಟ್ ನಿಂದ ಹೊರಹಾಕಿದ ಸ್ಥಳೀಯರು

12:44 PM May 25, 2020 | keerthan |

ಗಂಗಾವತಿ: ಕೋವಿಡ್-19 ಭೀತಿಯ ನಡುವೆಯೂ ತಾಲೂಕಿನ ಜಂಗ್ಲಿ ರಂಗಾಪೂರ ಗ್ರಾಮದಲ್ಲಿರುವ ಜಂಗಲ್ ಟ್ರೀ ರೆಸಾರ್ಟ್ ಆರಂಭಿಸಲಾಗಿದೆ. ರೆಸಾರ್ಟ್ ಗೆ ಬೆಂಗಳೂರು ಹೈದರಾಬಾದ್ ನಿಂದ ಟೆಕ್ಕಿಗಳು ಕಳೆದ ಶುಕ್ರವಾರ ರಾತ್ರಿ ಆಗಮಿಸಿದ್ದರು. ಇದನ್ನು ವಿರೋಧಿಸಿ ಜಂಗ್ಲಿ ರಂಗಾಪೂರ ಗ್ರಾಮದ ಮಹಿಳೆಯರು ರೆಸಾರ್ಟ್ ಮಾಲೀಕರು ಮತ್ತು ಟೆಕ್ಕಿಗಳನ್ನು ರೆಸಾರ್ಟ್ ನಿಂದ ಹೊರ ಹಾಕಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿದೆ.

Advertisement

ಕೋವಿಡ್-19 ರೋಗದ ಹಿನ್ನೆಲೆಯಲ್ಲಿ ಜನರು ಭಯದ ನೆರಳಿನಲ್ಲಿರುವಾಗ ರೆಸಾರ್ಟ್ ಆರಂಭ ಮಾಡಿ ಬೆಂಗಳೂರು ಹೈದರಾಬಾದ್ ಮೂಲದ ಪ್ರವಾಸಿಗರಿಗೆ ರೂಮ್ ಕೊಡುವ ಮೂಲಕ ಸ್ಥಳೀಯರು ಭಯಭೀತರಾಗುವಂತಾಗಿದೆ. ಕೂಡಲೇ ಪ್ರವಾಸಿಗರನ್ನು‌ ಕ್ವಾರಂಟೈನ್ ಮಾಡಬೇಕು. ರೆಸಾರ್ಟ್ ಮಾಲೀಕರ ವಿರುದ್ದ‌ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದರು. ಸ್ಥಳಕ್ಕೆ ತೆರಳಿದ ಗ್ರಾಮೀಣ ಪೊಲೀಸರು ಸ್ಥಳೀಯರನ್ನು ಸಮಾಧಾನಪಡಿಸಿದರು.

ಕೋವಿಡ್-19 ಸಂದರ್ಭದಲ್ಲಿ ಅಕ್ರಮವಾಗಿ ರೂಂ ಬಾಡಿಗೆ ನೀಡಿದ ರೆಸಾರ್ಟ್ ಮಾಲೀಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಘಟನೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಗ್ರಾಮೀಣ ಪಿಎಸ್ಐ ಜೆ.ದೊಡ್ಡಪ್ಪ ಉದಯವಾಣಿ ಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next