Advertisement
ಪರ್ತ್ ನ ಆಪ್ಟಸ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕೆಎಲ್ ರಾಹುಲ್ (KL Rahul) ಜತೆ ಬ್ಯಾಟಿಂಗ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಗಾಯಗೊಂಡ ಗಿಲ್ ಬದಲಿಗೆ ಅವಕಾಶ ಪಡೆದ ಕನ್ನಡಿಗ ದೇವದತ್ತ ಪಡಿಕ್ಕಲ್ ಉತ್ತಮ ರಕ್ಷಣಾತ್ಮಕ ಆಟವಾಡಿದರೂ ರನ್ ಗಳಿಸಲು ಸಾಧ್ಯವಾಗಲಿಲ್ಲ. 23 ಎಸೆತ ಎದುರಿಸಿದ ಪಡಿಕ್ಕಲ್ ಶೂನ್ಯಕ್ಕೆ ಕ್ಯಾಚಿತ್ತು ಔಟಾದರು.
Related Articles
Advertisement
ಟೀಂ ಇಂಡಿಯಾ ಪರ ಇಂದು ಇಬ್ಬರು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತು ವೇಗಿ ಹರ್ಷಿತ್ ರಾಣಾ ಅವರು ಟೆಸ್ಟ್ ಕ್ಯಾಪ್ ಪಡೆದರು.
ಅಶ್ವಿನ್-ಜಡ್ಡು ಇಲ್ಲ
ಈ ಪಂದ್ಯಕ್ಕೆ ಭಾರತ ಏಕೈಕ ಸ್ಪಿನ್ನರ್ ನೊಂದಿಗೆ ಕಣಕ್ಕಿಳಿದಿದೆ. ಅದು ವಾಷಿಂಗ್ಟನ್ ಸುಂದರ್. ಅವರು ಆಲ್ ರೌಂಡರ್ ರೂಪದಲ್ಲಿ ಆಡುತ್ತಿದ್ದಾರೆ. ಪ್ರಮುಖ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ಅವಕಾಶ ನೀಡಲಾಗಿಲ್ಲ.
ತಂಡಗಳು
ಭಾರತ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿ.ಕೀ), ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ (ನಾ), ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.