ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧಿಕಾರವಧಿಯಲ್ಲಿ ಒಟ್ಟು 11 ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದು ರಾಜ್ಯದ ವಿಧಾನ ಪರಿಷತ್ ಇತಿಹಾಸದಲ್ಲಿಯೇ ಅತಿ ಹೆಚ್ಚಿನದಾಗಿದೆ.
ಹೊರಟ್ಟಿ 2018ರಿಂದ ಇಲ್ಲಿಯವರೆಗೆ ಮೂರು ಅವಧಿಗೆ ಸಭಾಪತಿಯಾಗಿದ್ದು, ಈ ಅವಧಿಯಲ್ಲಿ 11 ಮಂದಿ ರಾಜೀನಾಮೆ ನೀಡಿದ್ದಾರೆ. 2022ರಿಂದ ಇಲ್ಲಿಯ ವರೆಗೆ ಏಳು ಮಂದಿ ರಾಜೀನಾಮೆ ನೀಡಿರುವುದು ವಿಶೇಷ. 11 ಜನ ವಿಧಾನ ಪರಿಷತ್ ಸದಸ್ಯರಲ್ಲಿ ಬಿಜೆಪಿಯ ಐವರು, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ತಲಾ ಮೂವರು ಸದಸ್ಯರಿದ್ದಾರೆ.
2018ರಿಂದ 2024ರ ಮಾ.21ರ ವರೆಗೆ 11 ಸದಸ್ಯರು ರಾಜೀನಾಮೆ ನೀಡಿದ್ದಾರೆ. ವಿ.ಎಸ್.ಉಗ್ರಪ್ಪ, ಶ್ರೀನಿವಾಸ ಮಾನೆ, ಸಿ.ಆರ್.ಮನೋಹರ, ಸಿ.ಎಂ.ಇಬ್ರಾಹಿಂ, ಪುಟ್ಟಣ್ಣ, ಬಾಬುರಾವ್ ಚಿಂಚನಸೂರ, ಆರ್.ಶಂಕರ, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ, ಜಗದೀಶ ಶೆಟ್ಟರ್, ಮರಿತಿಬ್ಬೇಗೌಡ ರಾಜೀನಾಮೆ ನೀಡಿದವರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಮತ್ತೂಬ್ಬ ಸದಸ್ಯರು ರಾಜೀನಾಮೆ ನೀಡುವುದಾಗಿ ಹೇಳಿದ್ದು, ಅವರು ರಾಜೀನಾಮೆ ನೀಡಿದರೆ ಸಂಖ್ಯೆ 12ಕ್ಕೆ ಹೆಚ್ಚಲಿದೆ ಎಂದು ಹೊರಟ್ಟಿ ಹೇಳಿದರು.