ಹಾಸನ: ಅನಧಿಕೃತ ಮರಳು ಸಂಗ್ರಹಣೆ ಸಂಬಂಧ ಜಿಲ್ಲಾಧಿಕಾರಿಯವರು ನೀಡಿ ರುವ ನೋಟಿಸ್ ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ತನಿಖೆ ನಡೆಸಿ ನನ್ನ ಮೇಲಿನ ಆರೋಪ ಸಾಬೀತುಪಡಿಸಿ ದರೆ ಹುದ್ದೆಗೆ ರಾಜೀನಾಮೆ ನೀಡುವೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅನಧಿಕೃತವಾಗಿ ಮರಳು ಸಂಗ್ರಹಣೆಗೆ ಸಹಕಾರ ನೀಡಿಲ್ಲ. ಸಕಲೇಶಪುರ ತಾಲೂಕು ಅರಕೆರೆ ಬಳಿ ಓಷಿಯನ್ ಕಂಪನಿಯು ರಾಷ್ಟ್ರೀಯ ಹೆದ್ದಾರಿ ಮತ್ತು ಎತ್ತಿನಹೊಳೆ ಕಾಮಗಾರಿಗೆ ಮರಳು ಸಂಗ್ರಹಣೆಗೆ ನಾನು ಶಿಫಾರಸನ್ನೂ ಮಾಡಿಲ್ಲ. ನನ್ನ ಮೇಲಿನ ಆರೋಪವನ್ನು ಸಾಬೀತುಪಡಿಸಿದರೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕಷ್ಟೇ ಅಲ್ಲ. ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುವೆ ಎಂದು ಅವರು ಹೇಳಿದರು.
ಮನಸ್ಸಿಗೆ ನೋವಾಗಿದೆ: ಓಷಿಯನ್ ಕಂಪನಿ ಎತ್ತಿನಹೊಳೆ ಯೋಜನೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಅರಕೆರೆಯ ಬಳಿ ಮರಳು ಸಂಗ್ರಹಣೆ ಮಾಡಿರುವ ಸ್ಥಳಕ್ಕೆ ಜಿಲ್ಲಾಧಿಕಾರಿಯವರು ಭೇಟಿ ನೀಡಿ ಸರ್ಕಾರಕ್ಕೆ ರಾಜಧನ ನೀvದೇ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ್ದಾರೆ ಎಂದು 9 ಸಾವಿರ ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಮರಳು ಸಂಗ್ರಹಣೆ ಮಾಡಲು ನಾನು ಶಿಫಾರಸು ಮಾಡಿದ್ದೇನೆ ಎಂದು ನನಗೆ ನೋಟಿಸ್ ನೀಡಿದ್ದಾರೆ. ಈ ನೋಟಿಸ್‌ನಿಂದ ನನ್ನ ಹುದ್ದೆಗೆ ಹಾಗೂ ವೈಯಕ್ತಿಕವಾಗಿಯೂ ಧಕ್ಕೆ ಯಾಗಿದೆ. ಜಿಲ್ಲಾಧಿಕಾರಿ ಪರಾಮರ್ಶೆ ಮಾಡದೇ ನೋಟಿಸ್ ನೀಡಿರುವುದು ನನ್ನ ಮನಸ್ಸಿಗೆ ನೋವ ನ್ನುಂಟು ಮಾಡಿದೆ ಎಂದು ಹೇಳಿದರು.
ಮಾನನಷ್ಟ ಮೊಕದ್ದಮೆ: ಓಷಿಯನ್ ಕಂಪನಿಯ ನೌಕರರು ನೀಡಿದ ಮಾಹಿತಿಯ ಮೇರೆಗೆ ಜಿಲ್ಲಾಧಿ ಕಾರಿಯವರು ನನಗೆ ನೋಟಿಸ್ ನೀಡಿರಬಹುದು. ಕಂಪನಿಯ ನೌಕರರು ಮಾಹಿತಿ ನೀಡಿದ್ದರೆ ಆ ಕಂಪನಿಯ ಮೇಲೆಯೇ ನಾನು ಮಾನನಷ್ಟ ಮೊಕ ದ್ದಮೆ ಹೂಡುವೆ. ಈ ಸಂಬಂಧ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿರುವೆ ಎಂದು ಹೇಳಿದ ಉಪಾಧ್ಯಕ್ಷರು, ನಾನು ಓಷಿಯನ್ ಕಂಪನಿ ಮರಳು ದಾಸ್ತಾನು ಮಾಡಲು ಶಿಫಾರಸು ಮಾಡಿದ ಯಾವು ದಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಅಥವಾ ದಾಖಲೆ ಸಮೇತ ಪ್ರಕರಣ ದಾಖಲಿಸಲಿ ಎಂದು ಸವಾಲು ಹಾಕಿದರು.
ತಪ್ಪು ಮಾಹಿತಿ: ಈ ಮರಳು ಸಂಗ್ರಹಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅರೆಕೆರೆ ಗ್ರಾಮದಲ್ಲಿ ಮರಳು ಸಂಗ್ರಹಣೆ ಆಗಿದ್ದ ಜಾಗವೂ ನನ್ನದಲ್ಲ. ಅದು ಸೌಭಾಗ್ಯ ಎಂಬುವವರಿಗೆ ಸೇರಿದ್ದಾಗಿದೆ. ಆದರೂ ವಿನಾಕಾರಣ ನನಗೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಜಿಲ್ಲಾಧಿಕಾರಿಯವರಿಗೆ ಅಧೀನಾಧಿಕಾರಿಗಳು ಅಥವಾ ಓಷಿಯನ್ ಕಂಪನಿಯ ನೌಕರರು ತಪ್ಪು ಮಾಹಿತಿ ನೀಡಿರಬಹುದು ಎಂದರು.
ಈಗಾಗಲೇ ನಾನು ಜಿಲ್ಲಾಧಿಕಾರಿಯವರ ನೋಟಿಸ್‌ಗೆ ಲಿಖೀತ ಉತ್ತರ ನೀಡಿದ್ದೇನೆ. ಖುದ್ದಾ ಗಿಯೂ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಸಮಜಾಯಿಷಿ ನೀಡುವೆ ಎಂದು ಸುಪ್ರದೀಪ್ ಯಜಮಾನ್ ಅವರು ಸ್ಪಷ್ಟಪಡಿಸಿದರು.