Advertisement

ಸರ್ವೇ ನಂ.4 ವ್ಯಾಪ್ತಿ ಬಡಾವಣೆ ನಿವಾಸಿಗಳ ಪ್ರತಿಭಟನೆ

12:40 PM Jan 11, 2017 | |

ಮೈಸೂರು: ಕುರುಬಾರಹಳ್ಳಿ ಸರ್ವೇ ಸಂಖ್ಯೆ.4 ವ್ಯಾಪ್ತಿಯ ಬಡಾವಣೆ ನಿವಾಸಿಗಳ ಸಮಸ್ಯೆ ಪರಿಹರಿಸಲು ವಿಫ‌ಲ ವಾಗಿರುವ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ನಜ‚ರ್‌ಬಾದ್‌ ಠಾಣೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕುರುಬಾರಹಳ್ಳಿ ಸರ್ವೆ ಸಂಖ್ಯೆ.4ರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿಫ‌ಲವಾಗಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕುರುಬಾರಹಳ್ಳಿ ಸರ್ವೇ ಸಂಖ್ಯೆ.4ರಲ್ಲಿ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಬಡಾವಣೆಗಳನ್ನು ಸರ್ಕಾರ ಇದೀಗ ಬಿ ಕರಾಬು ಜಾಗವೆಂದು ಘೋಷಿಸಿದೆ. ಇದರಿಂದಾಗಿ ಈ ಭಾಗದ ನಿವಾಸಿಗಳು ಯಾವುದೇ ರೀತಿಯ ಭೂ ವ್ಯವಹಾರ ನಡೆಸದಂತೆ ತಡೆಯೊಡ್ಡಿರುವುದು ಖಂಡನೀಯ.

ಇದರಿಂದಾಗಿ ನಿವೇಶನ ಅಥವಾ ಮನೆಗಳನ್ನು ಮಾರಾಟ ಮಾಡಲು, ಖರೀದಿಸಲು ಹಾಗೂ ಭೂ ವ್ಯವಹಾರ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಸಾಕಷ್ಟು ಹೋರಾಟ ನಡೆಸಿದರೂ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ಹೊರಹಾಕಿದರು.

ಪ್ರತಿಭಟನೆಯಲ್ಲಿ ಉಪಮೇಯರ್‌ ರತ್ನಾ ಲಕ್ಷ್ಮಣ್‌, ಮಾಜಿ ಉಪಮೇಯರ್‌ ಎಂ. ಮಹದೇವಮ್ಮ, ಬಿಜೆಪಿ ಮುಖಂಡರಾದ ಬಿ.ಪಿ. ಮಂಜುನಾಥ್‌, ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ಡಾ. ಅನಿಲ್‌ ಥಾಮಸ್‌, ಆನಂದ್‌, ಮುರುಳಿ, ಕೆ. ಮಾದೇಶ್‌ ಇನ್ನಿತರರು ಪಾಲ್ಗೊಂಡಿದ್ದರು.

Advertisement

ಅಧಿಕಾರಿಗಳ ವಿರುದ್ಧ ಠಾಣೆಯಲ್ಲಿ ದೂರು
ಕುರುಬಾರಹಳ್ಳಿ ಸರ್ವೇ ಸಂಖ್ಯೆ.4 ವ್ಯಾಪ್ತಿಯ ಬಡಾವಣೆಯಲ್ಲಿನ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಸಾಕಷ್ಟು ಹೋರಾಟ ನಡೆಸಿದ್ದಾರೆ. ಆದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಈ ಹಿನ್ನೆಲೆಯಲ್ಲಿ ಬಡಾವಣೆ ನಿವಾಸಿಗಳ ಸಮಸ್ಯೆ ಬಗೆಹರಿಸುವಲ್ಲಿ ವಿಫ‌ಲವಾಗಿರುವ ಕಂದಾಯ ಇಲಾಖೆ ಕಾರ್ಯದರ್ಶಿ, ಮುಡಾ ಆಯುಕ್ತ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು. ಆದರೆ ದೂರು ಸ್ವೀಕರಿಸಿದ ನಜರ್‌ಬಾದ್‌ ಠಾಣೆ ಇನ್ಸ್‌ ಪೆಕ್ಟರ್‌ ಎಂ.ಎಲ್‌.ಶೇಖರ್‌, ಅಧಿಕಾರಿಗಳ ವಿರುದ್ಧ ಎಫ್ಐಆರ್‌ ದಾಖಲಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ದೂರು ದಾರರಿಗೆ ಎನ್‌ಸಿಆರ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next