Advertisement

ಭಾರತೀಯ ಸೇನೆಗೆ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ರೇಶ್ಮಿ, ಮೇಘಾ ಆಯ್ಕೆ

09:09 AM Jul 06, 2020 | mahesh |

ಮಂಗಳೂರು: ಕೊಚ್ಚಿಯ ಇ. ರೇಶ್ಮಿ ಗೋಪಿನಾಥ ಭಟ್‌ ಮತ್ತು ಬೆಂಗಳೂರಿನ ಡಾ| ಮೇಘಾ ಎನ್‌. ಶೆಣೈ ಅವರು ಭಾರತೀಯ ಸೇನೆಗೆ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ.

Advertisement

ಸಾಧನೆಗೆ ಶ್ಲಾಘನೆ
ವಿಶ್ವ ಕೊಂಕಣಿ ಕೇಂದ್ರದ ಅಲ್ಯುಮ್ನಿ ಸಂಘದಲ್ಲಿ ಸಕ್ರಿಯರಾಗಿರುವ ಇವರಿಬ್ಬರ ದೇಶ ಸೇವೆಯ ಕಡೆಗಿನ ಪ್ರೇರಣದಾಯಕ ನಡೆಗೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.  ವಿದ್ಯಾರ್ಥಿ ವೇತನದ ಸ್ಥಾಪನೆಯ ರೂವಾರಿ ಟಿ.ವಿ. ಮೋಹನದಾಸ ಪೈ, ಅಧ್ಯಕ್ಷ ರಾಮದಾಸ ಕಾಮತ್‌ ಯು., ಕಾರ್ಯದರ್ಶಿ ಪ್ರದೀಪ್‌ ಜಿ. ಪೈ, ಕ್ಷಮತಾ ಅಕಾಡೆಮಿಯ ಪ್ರಧಾನ ನಿರ್ದೇಶಕ ಉಲ್ಲಾಸ ಕಾಮತ್‌, ಸಂಚಾಲಕ ಗಿರಿಧರ ಕಾಮತ್‌, ಕೇಂದ್ರದ ಸಂಘಟನ ಕಾರ್ಯದರ್ಶಿ ನಂದಗೋಪಾಲ ಜಿ. ಶೆಣೈ, ಕೋಶಾಧಿಕಾರಿ ಬಿ.ಆರ್‌. ಭಟ್‌ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.

ರೇಶ್ಮಿ ಭಟ್‌ ತಾಂತ್ರಿಕ ಅಧಿಕಾರಿ
ಕೊಚ್ಚಿಯ ಗೋಪಿನಾಥ ಭಟ್‌ ಮತ್ತು ಶೋಭಾ ದಂಪತಿ ಪುತ್ರಿ ರೇಶ್ಮಿ ಭಟ್‌ ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌ ವಿಭಾಗದಿಂದ ಪದವಿಯನ್ನು ಪಡೆದಿದ್ದು ಬೆಂಗಳೂರು ಮತ್ತು ಹೈದರಾಬಾದ್‌ನ ವಾಯುಸೇನಾ ಅಕಾಡೆಮಿಯಲ್ಲಿ ಒಟ್ಟಾರೆ 96 ವಾರ ವಿವಿಧ ವಿಷಯಗಳಲ್ಲಿ ತರಬೇತಿ ಪಡೆದಿದ್ದಾರೆ. ಪ್ರಸಕ್ತ ಭಾರತೀಯ ವಾಯುಸೇನೆಯಲ್ಲಿ ತಾಂತ್ರಿಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಡಾ| ಮೇಘಾ ಎನ್‌. ಶೆಣೈ ವೈದ್ಯಕೀಯ ಅಧಿಕಾರಿ
ಬೆಂಗಳೂರಿನ ಇ.ಡಿ.ನರಸಿಂಹ ಶೆಣೈ ಮತ್ತು ಗೋಮತಿ ಶೆಣೈ ಅವರ ಪುತ್ರಿ ಡಾ| ಮೇಘಾ ಎನ್‌. ಶೆಣೈ ಅವರು ಎಂಬಿಬಿಎಸ್‌ ಪದವೀಧರರು. ಗಡಿ ಭದ್ರತಾ ಪಡೆಯಲ್ಲಿ ಅಸಿಸ್ಟೆಂಟ್‌ ಕಮಾಂಡಿಂಗ್‌ ವೈದ್ಯಕೀಯ ಅಧಿಕಾರಿಯಾಗಿ ಆಯ್ಕೆ ಗೊಂಡಿರುವ ಅವರು ಕೋವಿಡ್‌ ಶುಶ್ರೂಷಾ ಕೇಂದ್ರಗಳಲ್ಲಿ ತಮ್ಮ ಸೇವೆ ಸಲ್ಲಿಸಲು ನಿಯುಕ್ತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next