Advertisement

Reservation issue; ಬಿಜೆಪಿಯದ್ದು ಹಣೆಗೆ ತುಪ್ಪ ಸವರುವ ಕೆಲಸ; Siddaramaiah ವಾಗ್ಧಾಳಿ

10:00 PM Apr 09, 2023 | Team Udayavani |

ಬೆಂಗಳೂರು: ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಡವಾಗಿರುವ ಬಿಜೆಪಿ ಮೀಸಲಾತಿ ವಿಚಾರದಲ್ಲಿ ಹಲವು ಸಮುದಾಯಗಳ ಹಣೆಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Advertisement

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ರವಿವಾರ ಹಮ್ಮಿಕೊಂಡಿದ್ದ ಶೋಷಿತ ಸಮುದಾಯಗಳ ಮುಖಂಡರ ರಾಜ್ಯಮಟ್ಟದ ಸಂಕಲ್ಪ ಅಧಿವೇಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಮೂಗಿಗೆ ಸವರಿದ್ದರೆ ಅದರ ವಾಸನೆ ತಿಳಿಯುತ್ತಿತ್ತು. ಆದರೆ ಹಾಗೆ ಮಾಡದೇ, ನೇರವಾಗಿ ಹಣೆಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೆಸ್ಸೆಸ್‌ ಮತ್ತು ಹಿಂದೂ ಮಹಾಸಭಾದವರಿಗೆ ಸಂವಿಧಾನದ ಬಗ್ಗೆ ಕವಡೆ ಕಾಸಿನಷ್ಟೂ ಗೌರವವಿಲ್ಲ. ಆದರೆ ಈಗ ಬದ್ಧತೆಯಿಲ್ಲದವರು ಟಿಕೆಟ್‌ ದೊರೆಯದೆ ಬಿಜೆಪಿ ಸೇರುತ್ತಿದ್ದಾರೆ. ಅವರು ಕೂಡ ಇಂತವರಿಗಾಗಿಯೇ “ಬಿ’ ಫಾರಂ ಹಿಡಿದುಕೊಂಡಿದ್ದಾರೆ. ಮುಂದೆ ಬಿಜೆಪಿ ಗರ್ಭಗುಡಿಯೊಳಗೆ ನಡೆಯುವ ತೀರ್ಮಾನ ವಿರೋಧಿಸದೆ ಅವರು ಹೇಳಿದಂತೆ ಕೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರು ಈ ಹಿಂದೆ ಮಹಿಳಾ ಮೀಸಲಾತಿ ಸೇರಿ ಇತರ ವರ್ಗಗಳ ಮೀಸಲಾತಿ ವಿರೋಧಿಸಿದ್ದರು. ಆದರೆ ಈಗ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ.10 ಮೀಸಲಾತಿ ನೀಡಿದ ಬಳಿಕ ಅವರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಸಮಾವೇಶದಲ್ಲಿ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ (ಇಡಬ್ಲೂಎಸ್‌)ನೀಡುವ ಕಾನೂನನ್ನು ರದ್ದು ಮಾಡಬೇಕು ಎಂಬುವುದು ಸೇರಿ ಎಂಟು ನಿರ್ಣಯ ಕೈಗೊಳ್ಳಲಾಯಿತು.

Advertisement

ಬಹುಮತ ಬಾರದಿರಲು
ಜೆಡಿಎಸ್‌ ಪೂಜೆ
ಜೆಡಿಎಸ್‌ 120 ಸ್ಥಾನ ಪಡೆಯುವುದಿಲ್ಲ. ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದಿಲ್ಲ. ಆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದವರು ಯಾವ ಪಕ್ಷಕ್ಕೂ ಬಹುಮತ ಬಾರದಿರಲಿ ಎಂದು ಪೂಜೆ ಮಾಡುತ್ತ ಇದ್ದಾರೆ. ಸಮ್ಮಿಶ್ರ ಬಂದರೆ ಇವರು ಬಿಜೆಪಿ-ಕಾಂಗ್ರೆಸ್‌ ಜತೆ ಸೇರಿ ಸರಕಾರ ಮಾಡುತ್ತಾರೆ. ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವುದಾಗಿ ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಅಭ್ಯರ್ಥಿಗಳೇ ಇಲ್ಲದ ಅವರ ಪಕ್ಷ ಎಲ್ಲಿಂದ ಗೆಲ್ಲುತ್ತದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next