Advertisement

ಮೀಸಲು ಕೇಂದ್ರದ ಪರಮಾಧಿಕಾರ

01:55 PM Jun 17, 2020 | Suhan S |

ಕೊಪ್ಪಳ: ರಾಷ್ಟ್ರದಲ್ಲಿ ಎಸ್‌ಸಿ-ಎಸ್‌ಟಿ ಅವರಿಗೆ ಸಂವಿಧಾನದ ಆಶಯದ ಅನುಗುಣವಾಗಿ ಮೀಸಲಾತಿ ಸಿಗುವುದು ಕಾನೂನಿನ ಚೌಕಟ್ಟಿನಲ್ಲಿ ಸಿಗುವ ಪ್ರಕ್ರಿಯೆ. ಆದರೆ ಯಾವುದೇ ಒಂದು ಜನಾಂಗವನ್ನು ಎಸ್‌ಸಿ-ಎಸ್‌ಟಿ ಪಟ್ಟಿಗೆ ಸೇರಿಸುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಅದು ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಚರ್ಚೆ ಮಾಡಿ ಬೇಕು ಬೇಡಗಳ ನಿರ್ಣಯದ ಪರಮಾಧಿಕಾರ ಕೇಂದ್ರಕ್ಕಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

Advertisement

ಕುಷ್ಟಗಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 7,652 ಕಿಮೀ ರಾಷ್ಟ್ರೀಯ ಹೆದ್ದಾರಿ ಇವೆ. 4.124 ಕಿಮೀ ರಾಜ್ಯದಿಂದ ಉಸ್ತುವಾರಿ ವಹಿಸಿ ಅಭಿವೃದ್ಧಿ ಮಾಡುತ್ತಿದ್ದೇವೆ. ಎನ್‌ಎಚ್‌ಐದಿಂದ 3,528 ಕಿಮೀ ಅಭಿವೃದ್ಧಿ ಮಾಡುತ್ತಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದೆ. ಕರ್ನಾಟಕದಲ್ಲಿ ಎನ್‌ಎಚ್‌ಐದಡಿ ಕೇಂದ್ರವು 19 ಪ್ರೊಜೆಕ್ಟ್ಗಳನ್ನು 2,154 ಕೋಟಿಯಲ್ಲಿ ಮಾಡುತ್ತಿದೆ. ಅದರಲ್ಲಿ ರಾಜ್ಯವು 20 ಪ್ರೊಜೆಕ್ಟ್ ಕೈಗೆತ್ತಿಕೊಂಡಿದೆ. 830 ಕಿಮೀ ಉದ್ದ ರಸ್ತೆಯನ್ನು 4,762 ಕೋಟಿಯಲ್ಲಿ ಎನ್‌ಎಚ್‌ ಅಭಿವೃದ್ಧಿಗೆ ಸಹಕಾರ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next