Advertisement

ಗುತ್ತಿಗೆ ನೇಮಕಾತಿಯಲ್ಲಿಯೂ ಮೀಸಲಾತಿ: ಚರ್ಚೆಯಿಲ್ಲದೆ ಒಪ್ಪಿಗೆ

01:30 AM Feb 14, 2019 | Team Udayavani |

ವಿಧಾನಸಭೆ: ಸರ್ಕಾರಿ ಸೇವೆಗಳಲ್ಲಿ ಸಿ ಮತ್ತು ಡಿ ಗ್ರೂಪ್‌ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳು ವುದಕ್ಕೂ ಮೀಸಲಾತಿ ಕಲ್ಪಿಸುವ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ನೇಮಕಾತಿ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿಯ ಧರಣಿ ನಡುವೆಯೇ ಯಾವುದೇ ಚರ್ಚೆಯಿಲ್ಲದೇ ಅಂಗೀಕಾರಗೊಂಡಿತು.

Advertisement

1990ರ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಧಿನಿಯಮದಲ್ಲಿನ ಗೊಂದಲಗಳನ್ನು ನಿವಾರಿಸಿ, 45 ದಿನಗಳಿಗೆ ಹೆಚ್ಚಲ್ಲದ ತಾತ್ಕಾಲಿಕ, ಅರೆಕಾಲಿಕ, ಗುತ್ತಿಗೆ ಆಧಾರದ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಮೀಸಲಾತಿ ಅನ್ವಯ ನೇಮಕ ಮಾಡಿಕೊಳ್ಳಲು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ವಿವಿ ವಿಧೇಯಕ ಅನುಮೋದನೆ

ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಮೂರು ಖಾಸಗಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧೇಯಕ ಮಂಡಿಸಿದರು. ರಾಷ್ಟ್ರೀಯ ಶಿಕ್ಷಣ ಟ್ರಸ್ಟ್‌ ಅಡಿಯಲ್ಲಿ ಆರ್‌.ವಿ. ವಿಶ್ವವಿದ್ಯಾಲಯ. ಮೈಸೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎಂಜನಿಯರಿಂಗ್‌ ವಿಶ್ವವಿದ್ಯಾಲಯ ಸ್ಥಾಪನೆಗೆ ಅಂಗೀಕಾರ ನೀಡಲಾಯಿತು.

ಆದಿಚುಂಚನಗಿರಿ ವಿಶ್ವವಿದ್ಯಾಲಯ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದ್ದು, ಪ್ರಾಯೋಜಕ ಸಂಸ್ಥೆಯ ನಾಮನಿರ್ದೇಶಿತ ಸದಸ್ಯರ ಸಂಖ್ಯೆಯನ್ನು ಎರಡರಿಂದ ಮೂರಕ್ಕೆ ಹೆಚ್ಚಿಸುವುದು. ಕುಲಾಧಿಪತಿಯವರು ನಾಮ ನಿರ್ದೇಶಿಸಿದ ಇಬ್ಬರು ಶಿಕ್ಷಣ ತಜ್ಞರನ್ನು ಪ್ರಬಂಧಕ ಮಂಡಳಿಯ ಸದಸ್ಯರನ್ನಾಗಿ ನೇಮಿಸಲು ಅವಕಾಶ ಕಲ್ಪಿಸಿ, ವಿಧೇಯಕ್ಕೆ ತಿದ್ದುಪಡಿಗೊಳಿಸಿ ಅಂಗೀಕಾರ ಮಾಡಲಾಯಿತು.

Advertisement

ಬಸವ ಕಲ್ಯಾಣ ಅಭಿವೃದ್ಧಿ  ಮಂಡಳಿ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದ್ದು, ಬಸವಕಲ್ಯಾಣ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಗಳನ್ನು ಬಸವಕಲ್ಯಾಣ ಅಭಿವೃದ್ಧಿ  ಮಂಡಳಿಯಿಂದ ಹೊರಗಿಡಲು ತಿದ್ದುಪಡಿ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next