Advertisement
ಸರ್ಕಾರದಿಂದ ಉತ್ತಮ ಶಿಕ್ಷಕರು ಪ್ರಶಸ್ತಿ ನೀಡುವಾಗ ಮಹಿಳೆಯರಿಗೆ ತಾರತಮ್ಯ ಮಾಡುತ್ತಿರುವ ಬಗ್ಗೆ ಬಿಜೆಪಿ ಸದಸ್ಯೆ ತಾರಾ ಅನುರಾಧ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ ಸಚಿವರು ಈ ಉತ್ತರ ನೀಡಿದರು. 1.66 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ 80 ಸಾವಿರ ಪುರುಷರು, 85 ಸಾವಿರ ಮಹಿಳೆಯರು ಇದ್ದಾರೆ. ಒಟ್ಟು ಶಿಕ್ಷಕರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಆದರೆ, ಪ್ರಶಸ್ತಿ ಪಡೆದವರಲ್ಲಿ ಮಾತ್ರ ಪುರುಷರು ಹೆಚ್ಚಾಗಿದ್ದಾರೆ. ಪ್ರಶಸ್ತಿ ನೀಡುವಲ್ಲಿ ಈ ರೀತಿ ತಾರತಮ್ಯ ಏಕೆ. ಮಹಿಳೆಯರಲ್ಲಿ ಉತ್ತಮ ಶಿಕ್ಷಕರು ಇಲ್ಲವೇ ಎಂದು ತಾರಾ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಶಸ್ತಿ ಆಯ್ಕೆಗೆ ಇಲ್ಲಿವರೆಗೆ ಯಾವುದೇ ಅನುಪಾತ, ಮೀಸಲಾತಿ ಇರಲಿಲ್ಲ. ಈಗ ಸದನದಲ್ಲಿ ಉತ್ತಮ ಸಲಹೆ ಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವಾಗ ಮಹಿಳೆಯರಿಗೆ ಅನುಪಾತ ಅಥವಾ ಅಥವಾ ಮೀಸಲಾತಿ ನಿಗದಿಪಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ವಿಧಾನಪರಿಷತ್ತು: ಸದನದಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೇನೆ ಚರ್ಚೆಯಾಗುತ್ತದೆ. ಬೇರೆ ಸಮಸ್ಯೆಗಳ ಬಗ್ಗೆ ಕೇಳ್ಳೋರೇ ಇಲ್ಲ,
ಅಪರೂಪಕ್ಕೆ ಮಾತನಾಡಿದಾಗ ಮುಗಿಬಿದ್ದು ಕೂರಿಸಿಬಿಡುತ್ತಾರೆ ಎಂದು ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಅಳಲು ತೋಡಿಕೊಂಡರು. ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು, ಕೊಪ್ಪಳ ಜಿಲ್ಲೆಗಳ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಪ್ರಶ್ನೆ ಕೇಳಿ, ಸಮಸ್ಯೆಗಳನ್ನು ವಿವರಿಸುತ್ತಿದ್ದರು. ಅಷ್ಟರಲ್ಲಿ ವಿಷಯ ಬೇಗ ಮುಗಿಸುವಂತೆ ಸಭಾಪತಿ ಸೂಚನೆ ನೀಡಿದರು. ಇದರಿಂದ ಬಸವರಾಜ ಪಾಟೀಲ್ ಇಟಗಿ, ಈ ಸದನ ಇರೋದೇ ಶಿಕ್ಷಕರ ಸಮಸ್ಯೆಗಾಗಿ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.