Advertisement

ಇಂಟರ್‌ನೆಟ್‌ ಸ್ಪೀಡ್‌ಗೆ ಸಾಕ್ಷಿಯಾದ ಆಸ್ಟ್ರೇಲಿಯಾ

01:12 AM May 24, 2020 | Sriram |

ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್‌ ಸ್ಪೀಡ್‌ ಸಾಧನೆ ಮಾಡುವ ಮೂಲಕ ಆಸ್ಟ್ರೇಲಿಯಾ ದಾಖಲೆ ಬರೆದಿದೆ. ಪ್ರಸ್ತುತ ಪರೀಕ್ಷಿಸಲಾಗಿರುವ ಇಂಟರ್ನೆಟ್‌ ಪ್ರತಿ ಸೆಕೆಂಡಿಗೆ 44.2 ಟೆರಾಬೈಟ್‌ ವೇಗವಾಗಿತ್ತು ಎಂದು ಹೇಳಲಾಗಿದೆ. ಹಾಲಿ ಇರುವ ಬ್ರಾಡ್‌ಬ್ಯಾಂಡ್‌ಗೆ ಹೋಲಿಸಿದರೆ ಈ ವೇಗವು ಮಿಲಿಯನ್‌ ಪಟ್ಟು ಹೆಚ್ಚಾಗಿದೆ. ಈ ಮೂಲಕ ಬಳಕೆದಾರರು ಕೇವಲ ಒಂದು ಸೆಕೆಂಡ್‌ ಸಮಯದಲ್ಲಿ ಎಚ್‌ಡಿ ಗುಣಮಟ್ಟದ 1,000 ಚಲನಚಿತ್ರಗಳನ್ನು ಡೌನ್‌ಲೋಡ್‌ ಮಾಡ ಬಹುದು ಎಂದು ಸಂಶೋಧಕರು ಹೇಳಿದ್ದಾರೆ.

Advertisement

ಅಂದಹಾಗೆ ಈ ಅಸಾಮಾನ್ಯ ವೇಗವನ್ನು ಸಾಧಿಸಿ ತೋರಿಸಿರುವ ಮೋನಶ್‌, ಸ್ವಿಂಡ್‌ಬರ್ನ್ ಮತ್ತು ಆರ್‌ಎಂಐಟಿ ವಿಶ್ವವಿದ್ಯಾಲಯಗಳ ಸಂಶೋಧಕ ರನ್ನು ಒಳಗೊಂಡ ತಂಡ, ಮೆಲ್ಬೋರ್ನ್ ನಲ್ಲಿ ಡಾಟಾ ವರ್ಗಾವಣೆ ಮಾಡಲು ನೂರಾರು ಇನ್ಫ್ರಾರೆಡ್ ಲೇಸರ್‌ಗಳನ್ನು ಒಳಗೊಂಡಿರುವ ಮೈಕ್ರೊ- ಕೋಂಬ್‌ ಆಪ್ಟಿಕಲ್‌ ಚಿಪ್‌ ಅನ್ನು ಬಳಸಿರುವುದು ವಿಶೇಷ. ಪ್ರಸ್ತುತ ಸಿಂಗಾಪುರವು ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್‌ ಸೇವೆಯನ್ನು ಹೊಂದಿದ್ದು, ಅಲ್ಲಿನ ಡೌನ್‌ಲೋಡ್‌ ವೇಗವು ಪ್ರತಿ ಸೆಕೆಂಡಿಗೆ 197.3 ಮೆಗಾಬೈಟ್ಸ್‌ (ಎಂಬಿಪಿಎಸ್‌) ಇದೆ.

Advertisement

Udayavani is now on Telegram. Click here to join our channel and stay updated with the latest news.

Next