Advertisement

ಪರಿಣಾಮಕಾರಿ ಪ್ರತಿಕಾಯ ಸೃಷ್ಟಿ; ಇಲಿಗಳ ಮೇಲೆ ಪ್ರಯೋಗ ಯಶಸ್ವಿ

12:46 PM Sep 26, 2020 | Nagendra Trasi |

ಬರ್ಲಿನ್‌: ಕೋವಿಡ್ ವೈರಸ್‌ ವಿರುದ್ಧ ವಿಜ್ಞಾನಿಗಳು ಪರಿಣಾಮಕಾರಿಯಾದ ಪ್ರತಿಕಾಯಗಳನ್ನು ಪತ್ತೆ ಹಚ್ಚಿದ್ದು, ಕೋವಿಡ್ ಗೆ ಪರೋಕ್ಷ ಲಸಿಕೆ(ಪ್ಯಾಸಿವ್‌ ವ್ಯಾಕ್ಸಿನೇಷನ್‌) ಯನ್ನು ಅಭಿವೃದ್ಧಿಪಡಿಸಲು ಇದು ನೆರವಾಗಲಿದೆ ಎಂಬ ಆಶಾಭಾವ ಮೂಡಿದೆ.

Advertisement

ಪರೋಕ್ಷ ಲಸಿಕೆಯೆಂದರೆ ಸಿದ್ಧ ಪ್ರತಿ ಕಾಯ(ರೆಡಿಮೇಡ್‌ ಆ್ಯಂಟಿಬಾಡಿ)ಗಳನ್ನು ವ್ಯಕ್ತಿಯ ದೇಹದೊಳಕ್ಕೆ ಸೇರಿಸುವುದು. ಇವುಗಳು ಕೆಲವು ಸಮಯದ ನಂತರ ತಾವಾಗಿಯೇ ನಶಿಸಿಹೋಗುತ್ತವೆ. ಸಕ್ರಿಯ ಲಸಿಕೆ(ಆ್ಯಕ್ಟಿವ್‌ ವ್ಯಾಕ್ಸಿನೇಷನ್‌)ಯಲ್ಲಿ ಪ್ರತಿಕಾಯಗಳು ಅಭಿವೃದ್ಧಿಯಾಗುವವರೆಗೂ ಕಾಯಬೇಕಾಗುತ್ತದೆ. ಆದರೆ, ಪರೋಕ್ಷ ಲಸಿಕೆಯಲ್ಲಿ ತತ್‌ಕ್ಷಣದ ಪರಿಣಾಮ ಕಾಣಬಹುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಕೃತಕ ಪ್ರತಿಕಾಯ ಸೃಷ್ಟಿ: ಜರ್ಮನ್‌ ಸೆಂಟರ್‌  ಫಾರ್‌ ನ್ಯೂರೋಡೀಜನರೇಟಿವ್‌ ಡಿಸೀಸಸ್‌ (ಡಿಝೆಡ್‌ಎನ್‌ಇ) ಮತ್ತು ಚಾರೈಟ್‌-ಯುನಿ ವರ್ಸಿಟಾಟ್ಸ್‌ ಮೆಡಿಸಿನ್‌ ಬರ್ಲಿನ್‌ನ ವಿಜ್ಞಾನಿ ಗಳು ಕೋವಿಡ್‌-19 ಸೋಂಕಿನಿಂದ ಗುಣ ಮುಖರಾದ ವ್ಯಕ್ತಿಗಳ ದೇಹದಿಂದ ಸುಮಾರು 600 ಬಗೆಯ ಪ್ರತಿಕಾಯಗಳನ್ನು ಪ್ರತ್ಯೇಕಿಸಿದ್ದಾರೆ.

ಇದನ್ನೂ ಓದಿ: ತಂಗಿಯ ಒಂದು ಪ್ರಶ್ನೆಯಿಂದ ಕೃಷಿ ಮಹತ್ವ ಅರಿತು ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು

ನಂತರ, ಈ ಪೈಕಿ ಪರಿಣಾಮಕಾರಿ ಎಂದೆನಿಸಿದ ಪ್ರತಿಕಾಯಗಳನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಬಳಿಕ ಸೆಲ್‌ ಕಲ್ಚರ್‌ ಪ್ರಕ್ರಿಯೆ ಮೂಲಕ ಕೃತಕವಾಗಿ ಪ್ರತಿಕಾಯಗಳನ್ನು ಸೃಷ್ಟಿಸಿದ್ದಾರೆ. ರೋಗಕಾರಕಗಳು ಅಥವಾ ವೈರಸ್‌ ಮನುಷ್ಯನ ಜೀವಕೋಶದೊಳಕ್ಕೆ ಪ್ರವೇಶಿಸದಂತೆ ಮತ್ತು ಸಂತಾನೋತ್ಪತ್ತಿ ಮಾಡ ದಂತೆ ಈ ಪ್ರತಿಕಾಯಗಳು ತಡೆಯುತ್ತವೆ.

Advertisement

ಅಷ್ಟೇ ಅಲ್ಲದೆ, ಇವುಗಳು ರೋಗಕಾರಕಗಳನ್ನು ನಿರ್ಮೂಲನೆ ಮಾಡುವಂಥ ರೋಗನಿರೋಧಕ ಶಕ್ತಿಯನ್ನೂಕೋಶಗಳಿಗೆ ಒದಗಿಸುತ್ತವೆ. ಈಗಾಗಲೇ ಇಲಿಗಳ ಮೇಲೆ ಇದನ್ನು ಪ್ರಯೋಗಿಸಲಾಗಿದೆ. ಸೋಂಕು ದೃಢಪಟ್ಟ ಬಳಿಕ ಈ ಪ್ರತಿಕಾಯಗಳನ್ನು ಇಲಿಗಳ ದೇಹಕ್ಕೆ ಸೇರಿಸಿದಾಗ, ಅವುಗಳಲ್ಲಿ ಅಲ್ಪಪ್ರಮಾಣದ ರೋಗಲಕ್ಷಣಗಳಷ್ಟೇ ಗೋಚರಿಸಿವೆ. ಆದರೆ, ಸೋಂಕು ದೃಢಪಡುವ ಮುನ್ನವೇ ಈ ಪ್ರತಿಕಾಯಗಳನ್ನು ನೀಡಿದಾಗ, ಇಲಿಗಳಲ್ಲಿ ಅನಾರೋಗ್ಯವೇ ಕಾಣಿಸಿಕೊಳ್ಳಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಈಗ ಈ ಪ್ರತಿಕಾಯಗಳನ್ನು ಬಳಸಿ ಪರೋಕ್ಷ ಲಸಿಕೆ ಅಭಿವೃದ್ಧಿಪಡಿಸಲು ನಾವು ಮುಂದಾಗಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಭಾರತದಿಂದ ಬಂದು ಬಾಲಿವುಡ್ ನಲ್ಲಿ ಮಿಂಚು ಹರಿಸಿದ್ದ ಎಸ್ ಪಿಬಿ

Advertisement

Udayavani is now on Telegram. Click here to join our channel and stay updated with the latest news.

Next