Advertisement

ಭಾರತದ ಅಭಿವೃದ್ಧಿಗೆ ಸಂಶೋಧನೆ ಅನಿವಾರ್ಯ

04:02 PM Jun 10, 2017 | Harsha Rao |

ಕುಂಬಳೆ: ಭಾರತ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲು ವಿಶ್ವವಿದ್ಯಾಲಯಗಳ ಮೂಲಕ ಹೊಸ ಸಂಶೋಧನೆ, ಉತ್ಕೃಷ್ಟ ಆವಿಷ್ಕಾರ ಅನಿವಾರ್ಯ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಹೇಳಿದರು.

Advertisement

ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ ಕಾಸರಗೋಡು ಪೆರಿಯಾದ ತೇಜಸ್ವಿನಿ ಹಿಲ್ಸ್‌ ಕ್ಯಾಂಪಸ್ಸಿನ ಚಂದ್ರಗಿರಿ ಓಪನ್‌ ಥಿಯೇಟರಿನಲ್ಲಿ ಜರಗಿದ ದ್ವಿತೀಯ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರದಿಂದ ಆರ್ಥಿಕ ನೆರವು ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ವಿ.ವಿ. ಮೂಲಕ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿದೆ. ದೇಶದ 20 ಕೇಂದ್ರ ವಿಶ್ವವಿದ್ಯಾಲಯಗಳನ್ನು ಉನ್ನತ ಮಟ್ಟಕ್ಕೇರಿಸಲು ಕೇಂದ್ರ ಸರಕಾರ ಮುಂದಾಗಿದೆ.

ವಿ.ವಿ.ಗಳಲ್ಲಿ ಉನ್ನತ ವಿದ್ಯಾಭ್ಯಾಸದೊಂದಿಗೆ ವಿದ್ಯಾರ್ಥಿಗಳು ಗುರು ಹಿರಿಯರಲ್ಲಿ ಗೌರವ, ಉತ್ತಮ ಸಂಸ್ಕಾರ ಮತ್ತು ದೇಶ ಪ್ರೇಮ ಬೆಳೆಸಬೇಕಾಗಿದೆ. ವಿ.ವಿ.ಯಲ್ಲಿ ವಿದ್ಯಾರ್ಜನೆಗೈದ ವಿದ್ಯಾರ್ಥಿಗಳು ಉದ್ಯೋಗಕ್ಕೆ ವಿದೇಶ ಅವಲಂಬಿಸದೆ ಭಾರತದಲ್ಲೇ ಉದ್ಯೋಗ ನಿರ್ವಹಿಸಬೇಕು  ಎಂದು ಅವರು ಹೇಳಿದರು. 

ಜನಜಾಗೃತಿ 
ನೋಟು ಅಪಮೌಲಿÂàಕರಣದ ಬಳಿಕ ದೇಶದಲ್ಲಿ ಉಂಟಾದ ಕ್ಷಿಪ್ರ ಚಲನೆ ಕುರಿತು ಮತ್ತು ಸ್ವತ್ಛ ಭಾರತದ ಪ್ರಧಾನಿ
ಅವರ ದಿಟ್ಟ ನಿಲುವಿವಿಂದ ದೇಶದಲ್ಲಿ ಜನಜಾಗೃತಿ ಉಂಟಾಗಿದೆ  ಎಂದರು. ಪ್ರಸ್ತಾಪಿತ ಕೇಂದ್ರ ಸರಕಾರದ ವೈದ್ಯಕೀಯ ಕಾಲೇಜನ್ನು ಪೆರಿಯದಲ್ಲಿ ಆರಂಭಿಸುವ ಕುರಿತು ಕೇಂದ್ರ ಸರಕಾರದೊಂದಿಗೆ ಚರ್ಚಿಸುವ ಭರವಸೆಯನ್ನು ಸಚಿವರು ನೀಡಿದರು. 

ಸಮಾರಂಭದಲ್ಲಿ ವಿಶ್ವವಿದ್ಯಾಲಯದ 440 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕಾಸರಗೋಡು ಲೋಕಸಭಾ ಸದಸ್ಯ ಪಿ.ಕರುಣಾಕರನ್‌ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

Advertisement

ವಿಶ್ವವಿದ್ಯಾನಿಲಯದ  ಕುಲಪತಿ ಪದ್ಮಭೂಷಣ ಡಾ| ವೀರೇಂದ್ರಲಾಲ್‌ ಚೋಪ್ರ ಅಧ್ಯಕ್ಷತೆ ವಹಿಸಿದರು. ವಿ. ವಿ. ಉಪಕುಲಪತಿ ಡಾ| ಜಿ. ಗೋಪಕುಮಾರ್‌ ಸ್ವಾಗತಿಸಿದರು. ರಿಜಿಸ್ಟಾರ್‌ ಎ. ರಾಧಾಕೃಷ್ಣನ್‌ ನಾಯರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next