Advertisement

ಗಿರ್‌ ಅರಣ್ಯದ 36 ಸಿಂಹಗಳ ಆರೋಗ್ಯ ಈಗ ತೃಪ್ತಿಕರ : ಅಧಿಕಾರಿ

04:51 PM Nov 07, 2018 | udayavani editorial |

ಅಹ್ಮದಾಬಾದ್‌ : ಗುಜರಾತ್‌ನ ಗಿರ್‌ ವನ್ಯಜೀವಿ ಧಾಮದಲ್ಲಿ  ಡಜನಿಗೂ ಹೆಚ್ಚು ಸಿಂಹಗಳು ಅತ್ಯಂತ ಘಾತುಕ ವೈರಸ್‌ ದಾಳಿಗೆ ಮೃತಪಟ್ಟ ಬಳಿಕ ಪಾರುಗೊಳಿಸಲಾಗಿದ್ದ  ಸುಮಾರು 36 ಸಿಂಹಗಳು ಈಗ ಆರೋಗ್ಯದಿಂದಿವೆ; ಇವುಗಳನ್ನು ಇನ್ನಷ್ಟು ಕಾಲ ವಿಚಕ್ಷಣೆಯಲ್ಲಿ ಇರಿಸಲಾಗುವುದು ಎಂದು ಹಿರಿಯ ಅಧಿಕಾರಿ ಇಂದು ಬುಧವಾರ ತಿಳಿಸಿದ್ದಾರೆ.

Advertisement

ಗಿರ್‌ ಅರಣ್ಯ ಧಾಮದ ಸುತ್ತಲಿನ ದಾಲ್‌ಖನಿಯಾ ವಲಯದಲ್ಲಿ ಈಚೆಗೆ ಅತ್ಯಂತ ಮಾರಣಾಂತಿಕ ಕೆನೈನ್‌ ಡಿಸ್‌ಟೆಂಪರ್‌ ವೈರಸ್‌ (ಸಿಡಿಇ) ಸೋಂಕು ತಗಲಿದ್ದ ಕಾರಣ 23 ಸಿಂಹಗಳ ಪೈಕಿ 17 ಸಿಂಹಗಳು ಅಸುನೀಗಿದ್ದವು. ಈ ದುರಂತ ಸೆಪ್ಟಂಬರ್‌ ಮಧ್ಯದಲ್ಲಿ ನಡೆದಿತ್ತು. 

ಅದಾಗಿ ಪಾರುಗೊಳಿಸಲ್ಪಟ್ಟಿದ್ದ ಇತರ ಸಿಂಹಗಳನ್ನು ಅರಣ್ಯ ಇಲಾಖೆಯು ಮೂರು ವಿಭಿನ್ನ ಕೇಂದ್ರಗಳಲ್ಲಿ ಇರಿಸಿತ್ತು. ಅವುಗಳಿಗೆ ಸಿಡಿವಿ ತಗಲದಂತೆ ಚುಚ್ಚು ಮದ್ದು ನೀಡಲಾಗಿತ್ತು. ಅವೀಗ ನಿರಂತರ ವಿಚಕ್ಷಣೆಯಲ್ಲಿದ್ದು ಆರೋಗ್ಯದಿಂದಿವೆ ಎಂದು ಅಧಿಕಾರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next