ಕಾಪು: ಕಾಪು ಲೈಟ್ ಹೌಸ್ ಗಿಂತ 15 ಕಿ.ಮೀ ದೂರದಲ್ಲಿ ಬಂಡೆಗೆ ಸಿಲುಕಿ ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್ ಪ್ರೆಸ್ ವೆಸೆಲ್ ಟಗ್ ನಲ್ಲಿ ಸಿಲುಕಿರುವ 9 ಮಂದಿ ಸಿಬಂದಿಗಳ ರಕ್ಷಣಾ ಕಾರ್ಯಾಚರಣೆ ಕೋಸ್ಟ್ ಗಾರ್ಡ್ ಕ್ರಾಪ್ಟರ್ ಮೂಲಕ ಆರಂಭಗೊಂಡಿದೆ.
ಕೊಚ್ಚಿನ್ ನಿಂದ ಆಗಮಿಸಿರುವ ನೌಕಾ ಪಡೆಯ ಹೆಲಿಕಾಪ್ಟರ್ ಮೂಲಕ ಟಗ್ ನಲ್ಲಿರುವ ಸಿಬ್ಬಂದಿಗಳ ರಕ್ಷಣಾ ಕಾರ್ಯ ಆರಂಭವಾಗಿದೆ. ಮಂಗಳೂರಿಗೆ ಆಗಮಿಸಿದ ಹೆಲಿಕಾಪ್ಟರ್ ಇದೀಗ ಟಗ್ ಸಿಲುಕಿರುವ ಕಾಪುವಿಗೆ ಬಂದಿದೆ.
ಇದನ್ನೂ ಓದಿ:ಸಮುದ್ರದ ಮಧ್ಯೆ ಸಿಲುಕಿದ ಟಗ್: ರಕ್ಷಣೆಗೆ ಆಗಮಿಸಿದ ನೌಕಾದಳದ ಹೆಲಿಕಾಪ್ಟರ್
ಬಂಡೆಗೆ ಢಿಕ್ಕಿಯಾಗಿ ನಿಂತಿರುವ ಟಗ್ ಮತ್ತು ಅನತಿ ದೂರದಲ್ಲಿರುವ ಕೋಸ್ಟ್ ಗಾರ್ಡ್ ನ ವರಾಹ ಹಡಗಿನ ನಡುವೆ ಹೆಲಿಕಾಪ್ಟರ್ ಸುತ್ತುತ್ತಿದ್ದು, ರಕ್ಷಣೆಗೆ ಸಿದ್ದತೆ ನಡೆಸುತ್ತಿದ್ದಾರೆ.
ಎನ್ಎಂಪಿಟಿ ಬಂದರಿನ ಹೊರವಲಯದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಚಂಡಮಾರುತದ ಪರಿಣಾಮ ಆ್ಯಂಕರ್ ತುಂಡಾಗಿ ತೇಲಿ ಬಂದು, ಕಾಪು ಬಳಿಯಲ್ಲಿ ಅಪಘಾತಕ್ಕೊಳಗಾದ ಕೋರಮಂಡಲ ಎಕ್ಸ್ ಪ್ರೆಸ್ ಟಗ್ ನ 9 ಮಂದಿ ಸಿಬ್ಬಂದಿ ಸಿಲುಕಿದ್ದರು.
ಇದನ್ನೂ ಓದಿ: ಸಮುದ್ರ ಮಧ್ಯೆ 40 ಗಂಟೆಯಿಂದ ಒದ್ದಾಡುತ್ತಿರುವ ಟಗ್ ಸಿಬ್ಬಂದಿ: ಇನ್ನೂ ನಡೆಯದ ರಕ್ಷಣಾ ಕಾರ್ಯ
ಶುಕ್ರವಾರ ಬೆಳಗ್ಗೆ11.30 ರಿಂದ ಕಡಲಲ್ಲಿ ತೇಲುತ್ತಿರುವ ಕೋರಮಂಡಲ ಎಕ್ಸ್‌ಪ್ರೆಸ್ ಟಗ್ ಶನಿವಾರ ಬೆಳಗ್ಗೆ 8.30 ಕ್ಕೆ ಕಾಪು ಲೈಟ್ ಬಳಿಯಿಂದ ಸುಮಾರು ಹದಿನೈದು ಕಿಲೋ ಮೀಟರ್ ದೂರದ ಕಾಪು ಪಾರ್ ಬಳಿ ಬಂಡೆಗೆ ಢಿಕ್ಕಿ ಹೊಡೆದು ನಿಂತಿರುವುದು ಪತ್ತೆಯಾಗಿತ್ತು.