Advertisement

ಒಕ್ಕಲಿಗ‌ರ ಸಮುದಾಯಕ್ಕೆ  ಸೌಲಭ್ಯ ನೀಡಲು ಆಗ್ರಹ

07:44 PM Jun 28, 2021 | Team Udayavani |

ನೆಲಮಂಗಲ: ತಾಲೂಕಿನಲ್ಲಿ ಹೆಚ್ಚು ಮತ ಹೊಂದಿರುವ ಒಕ್ಕಲಿಗರ ಸಮುದಾಯಕ್ಕೆ ಸೌಲಭ್ಯ ನೀಡಲು ಕಡೆಗಣಿಸಿದ್ದಾರೆ ಎಂದು ಕೆಂಪೇಗೌಡ ಜಯಂತಿಯಲ್ಲಿ ಶಾಸಕರ ವಿರುದ್ಧ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ನಗರದ ತಾಲೂಕುಕಚೇರಿ ಆವರಣದಲ್ಲಿ ನಡೆದನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

Advertisement

ಜಾತಿಮತವಿಲ್ಲದೇ ಬೆಂಗಳೂರು ನಿರ್ಮಾಣ:ನಾಡಪ್ರಭು ಕೆಂಪೇಗೌಡ ಜಾತಿಮತಗಳಿಲ್ಲದೇ ಬೆಂಗಳೂರು ನಿರ್ಮಾಣ ಮಾಡಿದ್ದಾರೆ. ಆದರೆ, ತಾಲೂಕಿನಒಕ್ಕಲಿಗ ಸಮುದಾಯದ ಜನರು ನಗರದಲ್ಲಿ ಕುಳಿತುಕೊಳ್ಳಲು ಒಂದು ಅಡಿ ಜಾಗ ನೀಡಿಲ್ಲ. ಹಲವು ವರ್ಷದಿಂದ ಮನವಿ ಮಾಡಿದ್ದೇವೆ . ಆದರೂ, ಒಂದುಸಮುದಾಯ ಭವನ ನಿರ್ಮಾಣಕ್ಕೆ ಜಾಗ ನಿಗದಿಮಾಡಿಲ್ಲ. ಶಾಸಕರು, ಅಧಿಕಾರಿಗಳು ಪ್ರತಿವರ್ಷಕೆಂಪೇಗೌಡರ ಜಯಂತಿ ದಿನ ನೀಡುವ ಭರವಸೆಗಳುಸುಳ್ಳಾಗುತ್ತಿದ್ದು, ಈ ವರ್ಷ ಮರುಗಳಿ ಸಬಾರದುಎಂದು ಒಕ್ಕಲಿಗ ‌ ಸಮುದಾಯದ ಮುಖಂಡರುಆಕ್ರೋಶ ವ್ಯಕ್ತಪಡಿಸಿದರು.

ಪುಷ್ಪನಮನ: ತಾಲೂಕು ಆಡಳಿತದಿಂದ ನಡೆದ ನಾಡಪ್ರಭುಕೆಂಪೇಗೌಡರ ಜಯಂತಿಯನ್ನು ಶಾಸಕಡಾ.ಕೆ ಶ್ರೀನಿವಾಸಮೂರ್ತಿ, ತಹಶೀಲ್ದಾರ್‌ ಕೆ.ಮಂಜುನಾಥ್‌ ಹಾಗೂ ವಿವಿಧ ಸಮುದಾಯದಮುಖಂಡರು ಪುಷ್ಪ ನಮನ ಸಲ್ಲಿಸಿದರು.ಭವನ ನಿರ್ಮಾಣಕ್ಕೆ ಬದ್ಧ: ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ನಗರದ ಸುತ್ತಮುತ್ತಲಪ್ರದೇಶದಲ್ಲಿ ಜಾಗ ಗುರುತು ಮಾಡಿ, ಸಮುದಾಯ ಭವನ ನಿರ್ಮಾಣ ಮಾಡೋಣ ಎಂದುಹೇಳಿದಾಗ ಒಕ್ಕಲಿಗ ಸಮುದಾಯದಮುಖಂಡರು ಜಾಗ ನಿಗದಿಗೆ ಮುಂದಾಗಲಿಲ್ಲ,ನೀವೇ ಬರಲಿಲ್ಲದಿದ್ದ ಮೇಲೆ ನಾವು ಏನು ಮಾಡಲು ಸಾಧ್ಯ. ಭವನ ನಿರ್ಮಾಣಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.

ಶೀಘ್ರದಲ್ಲಿ ಜಾಗ: ಒಕ್ಕಲಿಗ ಸಮುದಾಯ ಭವನನಿರ್ಮಾಣಕ್ಕೆ ನಗರದ ಸಮೀಪದಲ್ಲೇ 1 ಎಕರೆಗೂಹೆಚ್ಚು ಜಾಗ ನಿಗದಿ ಮಾಡಲಾಗುತ್ತದೆ. ಈಗಾಗಲೇಮುಖಂಡರು 3-4 ಜಾಗ ಗುರುತಿಸಲಾಗಿದ್ದು,ಪರಿಶೀಲನೆ ಮಾಡಿ ಜಾಗ ನಿಗದಿ ಮಾಡಲಾಗುತ್ತದೆಎಂದು ತಹಶೀಲ್ದಾರ್‌ ಮಾಹಿತಿ ನೀಡಿದರು.

ಕೆಂಗಲ್‌ ಹನುಮಂತಯ್ಯ ಪ್ರತಿಮೆ: ತಾಲೂಕುಕಚೇರಿ ಆವರಣದಲ್ಲಿ ಕೆಂಗಲ್‌ ಹನುಮಂತಯ್ಯ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಕಂಚಿನಪ್ರತಿಮೆ ತಯಾರಿ ಹಂತದಲ್ಲಿದೆ. ಕೊರೊನಾದಿಂದವಿಳಂಬವಾಗಿದ್ದು, ಕೆಲವೇ ದಿನದಲ್ಲಿ ಪ್ರತಿಮೆ ನಿರ್ಮಾಣದ ಕಾರ್ಯ ಚುರುಕುಗೊಳ್ಳಲಿದೆ ಎಂದು ಸಮಿತಿಮುಖ್ಯಸ್ಥರು ತಿಳಿಸಿದ್ದಾರೆ.

Advertisement

ಇಒ ಮೋಹನ್‌ಕುಮಾರ್‌, ಎನ್‌ಪಿಎ ಮಾಜಿಅಧ್ಯಕ್ಷ ಹೇಮಂತ್‌ಕುಮಾರ್‌,ಕಸಪಾ ಅಧ್ಯಕ್ಷಕೇಶವಮೂರ್ತಿ, ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಚೆನ್ನಪ್ಪ,ಸತೀಶ್‌,ಕರವೇ ಉಪಾಧ್ಯಕ್ಷ ಉಮೇಶ್‌ ಗೌಡ,ಒಕಲಿ‌Rಗರ ಸಂಘದ ಬಾಬು, ನಾರಾಯಣಗೌಡ, ಸೈದಾಮಿಪಾಳ್ಯದ ರಮೇಶ್‌, ಮುಖಂಡರಾದ ನಾರಾಯಣಗೌಡ.ಜೆ.ಎಸ್‌, ಗೋಪಿ, ಶೇಖರ್‌, ಕೃಷ್ಣಪ್ಪ, ಪ್ರದೀಪ್‌, ರಂಗಸ್ವಾಮಿ, ಉಮೇಶ್‌, ವಿಜಯ್‌ ಹೊಸಪಾಳ್ಯ, ನರಸಿಂಹಯ್ಯ, ಕನಕರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next