Advertisement

Dandeli-Dharwad ರೈಲು ಸಂಚಾರ ಪುನಾರಂಭಿಸಲು ಕೇಂದ್ರ ಸಚಿವರಿಗೆ ಮನವಿ

08:54 PM Aug 06, 2023 | Team Udayavani |

ದಾಂಡೇಲಿ: ಕೋವಿಡ್ ಕಾರಣ ನೀಡಿ ಕಳೆದ ಮೂರು ವರ್ಷಗಳಿಂದ ಸ್ಥಗಿತ ಗೊಂಡಿರುವ ದಾಂಡೇಲಿ-ಧಾರವಾಡ ರೈಲು ಸಂಚಾರವನ್ನು ಬೆಂಗಳೂರಿನವರೆಗೂ ವಿಸ್ತರಿಸಿ ಪುನಾರಂಭಿಸಲು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಇಂದು ಹುಬ್ಬಳ್ಳಿಗೆ ತೆರಳಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಮತ್ತು ಹುಬ್ಬಳ್ಳಿ ರೇಲ್ವೆ ವಿಭಾಗದ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

26 ವರ್ಷಗಳಿಂದ ಸ್ಥಗಿತಗೊಂಡಿದ್ದ ದಾಂಡೇಲಿ-ಅಳ್ಳಾವರ ಪ್ರಯಾಣಿಕರ ರೈಲು ಸಂಚಾರವನ್ನು 2019 ನವೆಂಬರ 3 ರಂದು ದಾಂಡೇಲಿ   ಧಾರವಾಡ ಮಾರ್ಗವಾಗಿ ಬದಲಿಸಿ ಪುನಾರಂಭಿಸಲಾಗಿತ್ತು. ಆದರೆ ವಿಶ್ವಕ್ಕೆ ಕರಾಳತೆಯ ಭೀತಿ ಮೂಡಿಸಿದ್ದ ಕೋವಿಡ್ ಸಾಂಕ್ರಾಮಿಕ ರೋಗದ ಭೀತಿಯಿಂದ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು, ಹಾಗೆಯೇ ಕಳೆದ ಒಂದುವರೆ ವರ್ಷಗಳಿಂದ ಕಾಮಗಾರಿ ನಡೆಸಿ ದಾಂಡೇಲಿ -ಧಾರವಾಡ ಮಾರ್ಗವನ್ನು ವಿದ್ಯುತ್ ಚಾಲಿತ ಮಾರ್ಗವನ್ನಾಗಿ ಬದಲಿಸಿ ಆಧುನಿಕರಣ ಗೊಳಿಸಲಾಗಿದೆ.

ಆದರೆ ಕೋವಿಡ್ ಭೀತಿ ಮಾಯವಾಗಿ ವರ್ಷಗಳೆ ಕಳೆಯುತ್ತ ಬಂದಿದೆ. ಜೊತೆಗೆ ಪ್ರಯಾಣಿಕರ ಕೊರತೆಯು ಇಲ್ಲ. ಈ ಕಾರಣದಿಂದ ಸ್ಥಗಿತಗೊಂಡಿರುವ ರೈಲು ಸಂಚಾರವನ್ನು ಬೆಂಗಳೂರಿನವರೆಗೂ ವಿಸ್ತರಿಸಿ ಪುನಾರಂಭಿಸಬೇಕು, ಹಾಗೆಯೇ ರೈಲು ನಿಲ್ದಾಣದ ಹೆಸರನ್ನು ಬದಲಿಸಿ ದಾಂಡೇಲಿ ರೈಲು ನಿಲ್ದಾಣ ಎಂದು ಮರು ನಾಮಕಾರಣ ಮಾಡಬೇಕೆಂದು ಕೇಂದ್ರ ಸಚಿವರಿಗೆ ಮತ್ತು ಹುಬ್ಬಳ್ಳಿ ರೇಲ್ವೆ ವಿಭಾಗದ ಆಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡೆಪ್ಪನವರ್, ಸಮಿತಿಯ ಪದಾಧಿಕಾರಿಗಳಾದ ರಮೇಶ ಚಂದಾವರ, ಮುಜಿಬಾ ಛಬ್ಬಿ, ನೀಲಾ ಮಾದಾರ, ಜೆ.ಪಿ ಪೆರುಮಾಳ, ವಿಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next