Advertisement

ಮಳಖೇಡ ಮಾನ್ಯಖೇಟ ನಾಮಕರಣಕ್ಕೆ ಮನವಿ

01:11 PM Jul 18, 2022 | Team Udayavani |

ಸೇಡಂ: ಕನ್ನಡಕ್ಕೆ ಮೊದಲ ಕೃತಿ ನೀಡಿದ ರಾಷ್ಟ್ರಕೂಟರ ರಾಜಧಾನಿ ಮಳಖೇಡಕ್ಕೆ ಮೂಲ ಹೆಸರು ಮಾನ್ಯಖೇಟ ಎಂದು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಹೇಳಿದರು.

Advertisement

ತಾಲೂಕಿನ ಮಳಖೇಡದಲ್ಲಿರುವ ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಐತಿಹಾಸಿಕ ಕೋಟೆಗೆ ಭೇಟಿ ನೀಡಿ ಮಾತನಾಡಿದ ಅವರು, ಇಲ್ಲಿನ ಕೋಟೆಗೆ ಈ ಭಾಗದ ಮಕ್ಕಳನ್ನು ಕರೆತಂದು ರಾಷ್ಟ್ರಕೂಟರ ಇತಿಹಾಸ ಮತ್ತು ಅವರ ಸಾಹಸ ಶೌರ್ಯ ಹಾಗೂ ಅವರು ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಮಕ್ಕಳಿಗೆ ತಿಳಿಸುವಂತಾಗಬೇಕು. ಪ್ರತಿ ವರ್ಷ ರಾಷ್ಟ್ರಕೂಟರ ಉತ್ಸವವನ್ನು ಸರ್ಕಾರದಿಂದ ಆಯೋಜಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಮಳಖೇಡ ಕೋಟೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಕೋಟೆ ಒಳಗೆ ರಾಷ್ಟ್ರಕೂಟರ ಆಳ್ವಿಕೆಯ ಇತಿಹಾಸ ತಿಳಿಸುವ ರೀತಿಯ ಕಲಾಕೃತಿ ಹಾಗೂ ಬರಹಗಳನ್ನು ಅಳವಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು.

ಕಸಾಪ ತಾಲೂಕಾಧ್ಯಕ್ಷೆ ಸುಮಾ ಚಿಮ್ಮನ ಚೋಡಕರ್‌, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಟಗಿ, ತಾಲೂಕು ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಗೋಣಗಿ, ರಮೇಶ ರಾಠೊಡ, ವಲಯ ಅಧ್ಯಕ್ಷ ಬಸವರಾಜ ದೇಶಮುಖ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಶಂಕರಯ್ಯ ಸ್ವಾಮಿ, ಸಾಹಿತಿ ಮುಡಬಿ ಗುಂಡೇರಾವ, ಪ್ರಮುಖರಾದ ಕಲ್ಯಾಣಪ್ಪ ಪಾಟೀಲ, ರಾಜಶೇಖರ ಪುರಾಣಿಕ, ಗುರು ತಳಕಿನ್‌, ರಾಜು ಕಟ್ಟಿ, ರಾಚಣ್ಣ ಬಳಗಾರ, ಶರಣಪ್ಪ ಕೊಳ್ಳಿ, ಲಕ್ಷ್ಮಣ ರಂಜೋಳಕರ್‌, ಗೌಡಪ್ಪಗೌಡ ಪಾಟೀಲ, ರವಿಕುಮಾರ ಸಾಹುಕಾರ, ಸತೀಶ ನಂದೂರ, ರಾಮು ಮಂಗಾ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next