Advertisement

ಡ್ರಗ್ಸ್‌ ದಂಧೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

01:19 PM Sep 01, 2020 | Suhan S |

ರಾಮನಗರ: ಚಿತ್ರರಂಗದ ನಟ-ನಟಿಯರು ಸೇರಿ ಡ್ರಗ್ಸ್‌ ಸೇವಿಸುವ ಚಟದಲ್ಲಿರುವವರನ್ನು ಮುಲಾಜಿಲ್ಲದೆ ಬಂಧಿಸಿ, ರಾಜ್ಯದ ಯುವ ಸಮುದಾಯವನ್ನು ಕಾಪಾಡಬೇಕು ಎಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ನಗರದಲ್ಲಿ ಡೀಸಿ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ವೆಂಕಟಾಚಲಪತಿ ಅವರಿಗೆ ಮನವಿ ಸಲ್ಲಿಸಿದರು.

Advertisement

ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಶಬ್ದವೇದಿ ಚಿತ್ರದ ಮೂಲಕ ವರನಟ ಡಾ.ರಾಜ್‌ಕುಮಾರ್‌ ಮಾದಕ ವಸ್ತುಗಳ ಬಳಕೆ ವಿರೋಧಿಸಿದ್ದಾರೆ. ಜನತೆಗೆ ಅತ್ಯುತ್ತಮ ಸಂದೇಶ ರವಾನಿಸಿದ್ದಾರೆ. ಆದರೆ, ಇಂದು ಚಿತ್ರರಂಗದ ನಟ-ನಟಿಯರು ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದಾರೆ ಎಂಬುದು ನಾಚಿಕೆಗೇಡಿನ ಸಂಗತಿ. ಇವರಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ಅನುಕರಿಸಲು ಪ್ರಯತ್ನಿ ಸುತ್ತಾರೆ. ಪೊಲೀಸ್‌ ಇಲಾಖೆ ಯಾರ ಮುಲಾಜಿಗೂ ಒಳಗಾಗದೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದರು.

ಡ್ರಗ್‌ ಮಾಯಾ ಹಲವಾರು ವರ್ಷಗಳಿಂದ ಅಸ್ಥಿತ್ವದಲ್ಲಿದೆ. ಇದರ ಬಗ್ಗೆ ತಮಗೆ ಮಾಹಿತಿ ಇದೆ ಎಂದಿರುವ ಇಂದ್ರಜಿತ್‌ ಲಂಕೇಶ್‌, ಇಷ್ಟು ದಿನ ಮೌನವಹಿಸಿರುವುದು ಸರಿಯಲ್ಲ. ಡ್ರಗ್‌ ಮಾಫಿಯಾದಲ್ಲಿ ತೊಡಗಿಸಿಕೊಂಡವರಷ್ಟೇ ತಪ್ಪಿತಸ್ಥರಲ್ಲ, ಅದರ ಸತ್ಯ ತಿಳಿದಿದ್ದರೂ ಮೌನವಾಗಿದ್ದವರು ತಪ್ಪಿತಸ್ಥರೇ. ಮಾಹಿತಿ ಕೊಡಲು ಇಚ್ಚಿಸಿರುವ ಅವರಿಗೆ ಪೊಲೀಸರು ರಕ್ಷಣೆ ಕೊಡಬೇಕು ಎಂದರು.

ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್‌, ಯುವ ಘಟಕದ ಉಪಾಧ್ಯಕ್ಷ ರಂಜಿತ್‌ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ನರಸಿಂಹ ಮಾರ್ಚನಹಳ್ಳಿ, ಚಿಕ್ಕಬಳ್ಳಾ ಪುರ ಜಿಲ್ಲಾಧ್ಯಕ್ಷ ಚಂದ್ರಶೇಖರ್‌, ಪದಾಧಿಕಾರಿಗಳಾದ ವೆಂಕಟರಮಣ ಸ್ವಾಮಿ, ಚಂದನ್‌, ಚಿಕ್ಕಣ್ಣಪ್ಪ, ಕುಮಾರ್‌, ರಮೇಶ್‌, ರಾಜಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next