Advertisement

ವಿಲನ್‌ ಚಿತ್ರದ ವಿವಾದಿತ ಗೀತೆಗೆ ಕತ್ತರಿ ಹಾಕಲು ಮನವಿ

03:38 PM Oct 23, 2018 | |

ವಿಜಯಪುರ: ದಿ ವಿಲನ್‌ ಚಲನ ಚಿತ್ರದಲ್ಲಿ ಅಳವಡಿರುವ ಗೀತೆಯೊಂದು ಅಂಧರನ್ನು ಅವಮಾನಿಸುತ್ತಿದ್ದು ಕೂಡಲೇ ಗೀತೆಯನ್ನು ತೆಗೆದು ಹಾಕಬೆಕು ಹಾಗೂ ಚಿತ್ರ ನಿರ್ದೇಶಕ ಪ್ರೇಮ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ವಿಕಲಚೇತನರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ಪ್ರಮುಖ ಭೀಮನಗೌಡ ಪಾಟೀಲ ಸಾಸನೂರ, ದಿ ವಿಲನ್‌ ಚಿತ್ರದಲ್ಲಿ ಗರುಡ್ನಂಗೆ ಇಧ್ದೋನ್‌ ನೋಡ್ಲಾ ಕುರುಡ್ನಂಗ್‌ ಆಗೋದೊ ಎಂಬ ಪದ ದೃಷ್ಟಿ ದೋಷಿತರನ್ನು ಅವಮಾನಿಸುವಂತಿದ್ದು ಅಂಧರ ಭಾವನೆಗೆ ಧಕ್ಕೆ ತಂದಿದೆ ಎಂದು ದೂರಿದರು.

ವಿನೋದ ಖೇಡ ಮಾತನಾಡಿ, ವಿಕಲಚೇತನರ ಕಾಯ್ದೆ ಅನ್ವಯ ಯಾವುದೇ ವಿಕಲಚೇತನರ ನ್ಯೂನ್ಯತೆ ಎತ್ತಿ ಹಿಡಿಯಬಾರದು. ಅಷ್ಟೇ ಅಲ್ಲದೇ ದೃಷ್ಟಿ ದೋಷಿತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದವರ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುವ ಅವಕಾಶವಿದೆ. ಹೀಗಾಗಿ ಕೂಡಲೇ ಚಿತ್ರದ ಅವಮಾನಿತ ಗೀತೆಯನ್ನು ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು. ಅಶೋಕ ವಾಲೀಕಾರ, ಮಲ್ಲಿಕಾರ್ಜುನ ಉಮರಾಣಿ, ಪರಶುರಾಮ ಗಾಯಕವಾಡ, ಎ.ಎ. ಹಕೀಂ, ಅಂಬಣ್ಣ ಗುನ್ನಾಪುರ, ರಾಜು ಭುಯ್ನಾರ, ಶಂಕ್ರಮ್ಮ ಕೋರಿ, ಮಹಾದೇವಿ ಮಾನೆ, ಹೀನಾ ಚೌಧರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next