ಪೆರ್ಡೂರು: ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯ 8 ಮತ್ತು 9ನೇ ಬ್ಲಾಕ್‌ನ ನಾಗರಿಕ ವೇದಿಕೆ ವತಿಯಿಂದ ಪೆರ್ಡೂರು ಗ್ರಾ.ಪಂ. ಹಾಗೂ ಸ್ಥಳೀಯ ಶಾಸಕರ ವಿರುದ್ದ ಬೃಹತ್ ಪ್ರತಿಭಟನೆ ಮಾ. 23ರಂದು ಸ್ಥಳೀಯ ಗ್ರಾಮಸ್ಥರಿಂದ ನಡೆಯಿತು.
ಬುಕ್ಕಿಗುಡ್ಡೆ, ಕೈರು, ಹೊಸಂಗಡಿ ಈ ಪ್ರದೇಶದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಯಾವುದೇ ವಾಹನ ಸಂಚಾರಕ್ಕೆ ಸಾಧ್ಯವಿಲ್ಲದಷ್ಟು ದುಸ್ಥಿತಿಯಲ್ಲಿದೆ. ಮತ್ತು ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ಈ ಬಗ್ಗೆ ಹಲವು ಬಾರಿ ಸ್ಥಳೀಯ ಶಾಸಕರಾದ ವಿನಯಕುಮಾರ್ ಸೊರಕೆ ಇವರಿಗೆ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಲಿಲ್ಲ ಕೇವಲ ಸುಳ್ಳು ಭರವಸೆ ನೀಡುತ್ತ ಬಂದಿದ್ದಾರೆ. ಈ ಬಗ್ಗೆ ನಮಗೆ ನ್ಯಾಯ ಸಿಗದಿದ್ದರೆ ಮುಂದಿನ ಚುನಾವಣೆ ಮತದಾನ ಬಹಿಷ್ಕಾರ ಮಾಡುವುದು ಮತ್ತು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಎದುರು ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಸಂತೋಷ ಮರಕಾಲ ಹೇಳಿದರು.
ಸುಮಾರು ನಾಲ್ಕು ಕಿ.ಮೀ. ದೂರದ ಬುಕ್ಕಿಗುಡ್ಡೆಯಿಂದ, ಮಹಿಳೆಯರು,ಮಕ್ಕಳು 150ಕ್ಕೂ ಹೆಚ್ಚು ಗ್ರಾಮಸ್ಥರು ಸುಡು ಬಿಸಿಲನ್ನು ಲೆಕ್ಕಿಸದೆ ನಡೆದು ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಗ್ರಾ.ಪಂ. ಮುಂದೆ ಶಾಂತ ರೀತಿಯಲ್ಲಿ ಪ್ರತಿಭಟಿಸಿ, ಗ್ರಾ.ಪಂ. ಅಧ್ಯಕ್ಷೆ ಶಾಂಭವೀ ಕುಲಾಲ ಇವರಿಗೆ ಮನವಿ ನೀಡಿದರು. ಗ್ರಾಮಸ್ಥರಾದ ಜಯ ಕುಲಾಲ, ಉಮೇಶ ಸುವರ್ಣ, ಅನಿಲ್ ಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹಿರಿಯಡR ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ನೀಡಿದ್ದರು.