Advertisement

ಶೀಘ್ರ ಪರಿಹಾರ ನೀಡಲು ಮನವಿ 

07:00 AM Mar 11, 2018 | Team Udayavani |

ಕಾಪು: ಪಾದೂರು ಕಚ್ಚಾ ತೈಲ ಸಂಗ್ರಹಣ ಘಟಕ ಪೈಪ್‌ಲೈನ್‌ ಅಳವಡಿಕೆ ಸಮಯದಲ್ಲಿ ಬಂಡೆಕಲ್ಲು ಸ್ಫೋಟದ ಸಂದರ್ಭ ಹಾನಿಗೀಡಾಗಿರುವ 110 ಮನೆಗಳಿಗೆ ಪರಿಹಾರ ಒದಗಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದ್ದು, ಅತಿ ಶೀಘ್ರ ಪರಿಹಾರ ಒದಗಿಸುವಂತೆ ಕೇಂದ್ರ ಸರಕಾರವನ್ನು ಕಾಪು ಶಾಸಕ ವಿನಯಕುಮಾರ್‌ ಸೊರಕೆ ಆಗ್ರಹಿಸಿದ್ದಾರೆ. 

Advertisement

ಪಾದೂರು – ಚಂದ್ರನಗರದಲ್ಲಿ ಬಂಡೆಕಲ್ಲು ನ್ಪೋಟದ ಸಂದರ್ಭ ಉಂಟಾದ ಮನೆ ಹಾನಿಯ ನಿರಾಶ್ರಿತರು ಶಾಸಕರನ್ನು ಭೇಟಿಯಾಗಿ ನೀಡಿದ ಮನವಿ  ಸ್ವೀಕರಿಸಿದ ಅವರು ಪರಿಹಾರಕ್ಕಾಗಿ ಈಗಾಗಲೇ ಕೇಂದ್ರ ಸರಕಾರವನ್ನು ಒತ್ತಾಯಿಸ ಲಾಗಿದೆ. ಆದರೆ  ಇದುವರೆಗೂ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ. ಪರಿಹಾರ ನೀಡದೆ ಕಂಪೆನಿ ಉದ್ಘಾಟನೆಗೆ ಕೇಂದ್ರ ಪೆಟ್ರೋಲಿಯಂ ಸಚಿವರು ಆಗಮಿಸಿದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. 

ಈ ಬಗ್ಗೆ ಜಿಲ್ಲಾಧಿಕಾರಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕಂಪೆನಿಯ ಪ್ರಮುಖರೊಂದಿಗೆ ನಾನು ಮಾತನಾಡಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದೇನೆ. ಮೊದಲ ಹಂತದಲ್ಲಿ ಪರಿಹಾರ ಲಭಿಸಿದ್ದು, ಉಳಿದಂತೆ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಅವರು ಹೇಳಿದರು.

ಕಳತ್ತೂರು ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ, ಗ್ರಾ.ಪಂ. ಸದಸ್ಯ ರಾಜೇಶ್‌ ಮೂಲ್ಯ, ಕುತ್ಯಾರು ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ ಡಿ. ಶೆಟ್ಟಿ, ಮಹಮ್ಮದ್‌ ಫಾರೂಕ್‌ ಚಂದ್ರನಗರ, ಜಾನ್ಸನ್‌ ಕರ್ಕಡ, ಸವಿತಾ ರೆನ್ನಿ, ಶೈಲೇಶ್‌ ಶೆಟ್ಟಿ ಪೈಯ್ನಾರು, ಗಣೇಶ್‌ ನಾಯಕ್‌ ಪೈಯ್ನಾರು, ಉಮ್ಮರ್‌ ಸಾಹೇಬ್‌ ಚಂದ್ರನಗರ ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next