Advertisement
ಗುಜರಾತ್ ಸಂಸದರಾದ ರಾಜೇಶ್ ಬಾಯಿ ಚುಡಸಮ, ಕರಾವಳಿಯ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಶಾಸಕ ಕೆ. ರಘುಪತಿ ಭಟ್, ಮೀನುಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಅಖೀಲಭಾರತ ಮೀನುಗಾರರ ವೇದಿಕೆಯ ಅಧ್ಯಕ್ಷ ವೆಲ್ಜಿಬಾಯಿ ಕೆ. ಮಸಾನಿ, ಪ್ರಧಾನ ಕಾರ್ಯದರ್ಶಿ ದಯಾನಂದ ಕೆ. ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮುಖಂಡರಾದ ಯಶ್‌ಪಾಲ್ ಎ. ಸುವರ್ಣ, ನಿತಿನ್ ಕುಮಾರ್, ಮನೋಹರ ಬೋಳೂರು, ಇಬ್ರಾಹಿಂ, ಕರುಣಾಕರ ಸಾಲ್ಯಾನ್, ಕಿಶೋರ್ ಸುವರ್ಣ, ಅನಿಲ್ ನಿಯೋಗದಲ್ಲಿದ್ದರು.
ಹೊನ್ನಾವರ: ಮೀನುಗಾರರ ಪತ್ತೆಗೆ ಇಸ್ರೋದ ನೆರವು ಪಡೆದು ಉಪಗ್ರಹ ಮೂಲಕ ಹುಡುಕುವುದಕ್ಕೆ ಯೋಚನೆ ನಡೆಯುತ್ತಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು. ನಾಪತ್ತೆಯಾಗಿರುವ ಕುಮಟಾದ ಇಬ್ಬರು ಮತ್ತು ಹೊನ್ನಾವರ ಅನಂತವಾಡಿ ಬಳಿ ತುಂಬೇಬೀಳುವಿನ ರವಿ ಹರಿಕಂತ್ರ ಅವರ ಮನೆಗೆ ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಪತ್ರಕರ್ತರ ಜತೆ ಅವರು ಮಾತನಾಡಿದರು. ಈ ವಿಷಯದಲ್ಲಿ ಸರಕಾರ ನಿರ್ಲಕ್ಷ್ಯ ತೋರುತ್ತಿಲ್ಲ. ಹೈದರಾಬಾದ್‌ನ ಇನ್‌ಸ್ಟಿಟ್ಯೂಟ್ ಮೂಲಕವೂ ತನಿಖೆ ನಡೆಸುತ್ತಿದ್ದೇವೆ ಎಂದರು.