Advertisement

ರೈಲ್ವೇ ಟಿಕೆಟ್‌ ಕೌಂಟರ್‌ ತೆರೆಯಲು ಆಗ್ರಹ; ಕೊಂಕಣ ರೈಲ್ವೇ ಜನರಲ್‌ ಕೌಂಟರ್‌ ಬಂದ್‌

12:47 AM Feb 02, 2022 | Team Udayavani |

ಉಡುಪಿ: ಕೊರೊನಾ ನಿಯಮ ಸಡಿಲಗೊಂಡಿದ್ದರೂ ರೈಲು ನಿಲ್ದಾಣದಲ್ಲಿ ಜನರಲ್‌ ಟಿಕೆಟ್‌ ಕೌಂಟರ್‌ ಮತ್ತೆ ಆರಂಭಿಸದೇ ಇರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

Advertisement

2020ರ ಮೊದಲ ಕೋವಿಡ್‌ ಅವಧಿಯ ಸಂದಿಗ್ಧತೆಯ ಅನಂತರ ಕೊಂಕಣ ರೈಲ್ವೇ ಹೊರಡಿಸಿದ ಕಟ್ಟುನಿಟ್ಟಿನ ಮಾರ್ಗಸೂಚಿಯಲ್ಲಿ ರೈಲು ನಿಲ್ದಾಣಗಳಲ್ಲಿ ಜನರಲ್‌ ಟಿಕೆಟ್‌ ಕೌಂಟರ್‌ನ್ನು ಬಂದ್‌ ಮಾಡಲಾಗಿತ್ತು.
ಪ್ರಯಾಣಿಕರ ಸಂಖ್ಯೆ ಕಡಿಮೆ ಗೊಳಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಈ ಕ್ರಮ ಅನುಸರಿಸಲಾಗಿತ್ತು. ಮತ್ತು ರೈಲ್ವೇ ಕಚೇರಿಯಲ್ಲಿಯೂ ಶೇ. 50 ಸಿಬಂದಿ ಕಾರ್ಯನಿರ್ವಹಣೆ ದೃಷ್ಟಿಯಿಂದ ಬುಕ್ಕಿಂಗ್‌, ಜನರಲ್‌ ಟಿಕೆಟ್‌, ವಿಚಾರಣೆ ಕೌಂಟರ್‌ಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಸಾರ್ವಜನಿಕರು ಉಡುಪಿ, ಮಂಗಳೂರು ಭಾಗದಿಂದ ರಾಜ್ಯ ಮತ್ತು ದೇಶದ ಯಾವುದೇ ಭಾಗಕ್ಕೆ ತೆರಳಲು ಆನ್‌ಲೈನ್‌ನಲ್ಲಿ ಟಿಕೆಟ್‌ ಕಾದಿರಿಸಬೇಕಿತ್ತು.

ಮಂಗಳೂರು – ಮಡಗಾಂವ್‌ ಪ್ಯಾಸೆಂಜರ್‌ ರೈಲು ಮಾತ್ರ ಹೊರತುಪಡಿಸಿ ಬೇರೆ ಯಾವುದೇ ಸ್ಥಳಕ್ಕೆ ತೆರಳಲು ಕೌಂಟರ್‌ನಲ್ಲಿ ಟಿಕೆಟ್‌ ನೀಡಲಾಗುವುದು. ಬೆಂಗಳೂರು, ಮುಂಬಯಿ ಸಹಿತ ಬೇರೆ ಕಡೆಗಳಿಗೆ ರೈಲುಗಳಲ್ಲಿ ತುರ್ತು ಪ್ರಯಾಣಿಸಲು ಇದರಿಂದ ಸಮಸ್ಯೆಯಾಗುತ್ತದೆ.

ಹೆಚ್ಚುವರಿ ದಂಡ
ತುರ್ತು ಪ್ರಯಾಣದ ಅಗತ್ಯವಿರುವ ಪ್ರಯಾಣಿಕರು ರೈಲು ನಿಲ್ದಾಣದ ಟಿಸಿ ಬಳಿ ತೆರಳಿ ಪ್ರಯಾಣ ದರಕ್ಕೆ ಹೆಚ್ಚುವರಿ ದಂಡ ಪಾವತಿಸಿ ರೈಲಿನಲ್ಲಿ ಪ್ರಯಾಣ ಮಾಡುವ ಸ್ಥಿತಿ ಇದೆ. ಉಡುಪಿ, ಮಂಗಳೂರಿನಲ್ಲಿ ಕೋವಿಡ್‌ ಅನಂತರ ಕೌಂಟರ್‌ ಸಂಪೂರ್ಣ ಬಂದ್‌ ಇವೆ. ಶೀಘ್ರ ಹಿಂದಿನಂತೆ ವಿಚಾರಣೆ, ಬುಕ್ಕಿಂಗ್‌, ಜನರಲ್‌ ಟಿಕೆಟ್‌ ಕೌಂಟರ್‌ಗಳನ್ನು ಪ್ರತ್ಯೇಕ ತೆರೆದು ಸೇವೆ ಒದಗಿಸಬೇಕು ಎಂದು ಉಡುಪಿ ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಅಶೋಕ್‌ ಕೋಟ್ಯಾನ್‌, ಕಾರ್ಯದರ್ಶಿ ಮಂಜುನಾಥ ಮಣಿಪಾಲ ತಿಳಿಸಿದ್ದಾರೆ.

ಕೋವಿಡ್‌ ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಜನರಲ್‌ ಟಿಕೆಟ್‌ ಕೌಂಟರ್‌ ಬಂದ್‌ ಮಾಡಲಾಗಿತ್ತು. ಕೋವಿಡ್‌ ಪರಿಸ್ಥಿತಿ ಸುಧಾರಣೆಯಾಗದ ಕಾರಣ ಈ ನಿಯಮ ಈಗಲೂ ಮುಂದುವರಿದಿದೆ.
– ರಾಜೇಶ್‌ ನಾಯ್ಕ ,
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೊಂಕಣ ರೈಲ್ವೇ

Advertisement
Advertisement

Udayavani is now on Telegram. Click here to join our channel and stay updated with the latest news.

Next