Advertisement

ಜಮೀನು-ಮನೆ ನೀಡಿ ತಾಂಡಾ ಸ §ಳಾಂತರಿಸಲು ಮನವಿ

10:58 AM Jul 08, 2018 | Team Udayavani |

ಚಿಂಚೋಳಿ: ಅನೇಕ ತಲೆಮಾರಿನಿಂದ ನಾವು ಇಲ್ಲಿ ವಾಸವಾಗಿದ್ದೇವೆ. ನಮ್ಮ ಮನೆ, ಜಮೀನು ಬಿಟ್ಟು ಅರಣ್ಯಪ್ರದೇಶದಿಂದ ಹೊರಗೆ ಹೋಗಲು ಆಗುವುದಿಲ್ಲ. ನಮ್ಮ ಆಸ್ತಿಗೆ ಸೂಕ್ತ ಪರಿಹಾರ ನೀಡಿ, ಸರಕಾರದಿಂದ ಜಮೀನು, ವಾಸಿಸಲು ಮನೆ ಕಟ್ಟಿಸಿಕೊಟ್ಟರೆ ಸ್ಥಳಾಂತರಗೊಳ್ಳುತ್ತೇವೆ ಎಂದು ಸೇರಿಭಿಕನಳ್ಳಿ ತಾಂಡಾದ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಸೇರಿಭಿಕನಳ್ಳಿ ತಾಂಡಾದಲ್ಲಿ ಶನಿವಾರ ವನ್ಯಜೀವಿ ಧಾಮ ಅರಣ್ಯ ಇಲಾಖೆಯಿಂದ ಏರ್ಪಡಿಸಿದ ಸೇರಿಭಿಕನಳ್ಳಿ ತಾಂಡಾ ಸ್ಥಳಾಂತರ ಕುರಿತು ಶಾಸಕ ಡಾ| ಉಮೇಶ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ತಾಂಡಾದ ಮುಖ್ಯಸ್ಥ ಧನಸಿಂಗ ರಾಠೊಡ ಮಾತನಾಡಿ, ತಾಂಡಾದಲ್ಲಿ ಒಟ್ಟು 68.16 ಎಕರೆ ಗುಂಟೆ ಪಟ್ಟಾ ಜಮೀನಿದೆ. 55 ಮನೆಗಳು, 260 ಜನಸಂಖ್ಯೆಯಿದೆ. 55 ಕುಟುಂಬಗಳು ಆಹಾರ ಪಡಿತರ ಚೀಟಿಯನ್ನು ಪಡೆದುಕೊಂಡಿವೆ. ಪ್ರತಿಯೊಂದು ಕುಟುಂಬಕ್ಕೆ ವಿಶೇಷ ಪ್ಯಾಕೇಜ್‌ನಡಿ 15ಲಕ್ಷ ರೂ. ನೀಡಬೇಕು. ಜಮೀನು ಇಲ್ಲದವರಿಗೆ ಜಮೀನು ಸರಕಾರದಿಂದ ಕೊಡಿಸಬೇಕು. ಪ್ರತಿ ಎಕರೆಗೆ 7ಲಕ್ಷ ರೂ.ನೀಡಬೇಕು. ವಾಸಿಸುವುದಕ್ಕಾಗಿ ಮನೆ ನಿರ್ಮಿಸಿಕೊಡಬೇಕು. ಜಮೀನುಗಳಲ್ಲಿ ಬೋರವೆಲ್‌ ಕೊರೆಯಿಸಿ ವಿದ್ಯುತ್‌ ಸಂಪರ್ಕ ಕೊಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ಶಾಸಕ ಡಾ| ಉಮೇಶ ಜಾಧವ ತಾಂಡಾ ಜನರ ಅಭಿಪ್ರಾಯ ಆಲಿಸಿ, ಬೇಕಾಗುವ ಸೌಲಭ್ಯ, ಬೇಡಿಕೆ, ಆಸ್ತಿಪಾಸ್ತಿ ಬಗ್ಗೆ ಪರಿಹಾರ ನಿಗದಿಪಡಿಸಿ ಒಮ್ಮತದಿಂದ ಎಲ್ಲರೂ ತಿಳಿಸಿದರೆ ನಾನು ಸರಕಾರದ ಗಮನ ಸೆಳೆದು ಹೆಚ್ಚಿನ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

ಜಮೀನು ಕಳೆದುಕೊಂಡವರಿಗೆ ಚಿಮ್ಮಾಇದಲಾಯಿ, ಐನೋಳಿ, ಭೋಗಾಲಿಂಗದಳ್ಳಿ ಗ್ರಾಮಗಳ ಸುತ್ತಮುತ್ತ ಜಮೀನು ಕೊಡಿಸುವ ಪ್ರಯತ್ನ ಮಾಡುತ್ತೇನೆ. ಅರಣ್ಯ ಇಲಾಖೆ ತೆಗೆದುಕೊಳ್ಳುವ ನಿಯಮಗಳಿಗೆ ಬದ್ಧರಾಗಬೇಕು ಎಂದು ಸಲಹೆ ನೀಡಿದರು.

Advertisement

ತಾಂಡಾದ ಮುಖ್ಯಸ್ಥರಾದ ಗೋಪಾಲ ಜಾಧವ, ಮನ್ನುಸಿಂಗ್‌ ರಾಠೊಡ, ರಾಮಶೆಟ್ಟಿ ರಾಠೊಡ, ಶಂಕರ,ಲಿಂಬಾಜಿ, ಅಶೋಕ ಚವ್ಹಾಣ ಇನ್ನಿತರರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಡಿಎಫ್‌ಒ ಶಿವಶಂಕರ, ಎಸಿಎಫ್‌ ರಾಮಕೃಷ್ಣ ಯಾದವ್‌, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ,ಆರ್‌ಎಫ್‌ಒ ಸುನೀಲ ಚವ್ಹಾಣ, ತಹಶೀಲ್ದಾರ್‌ ಪಂಡಿತರಾವ್‌ ಬಿರಾದಾರ, ತಾಪಂ ಅಧಿಕಾರಿ ಮಹಮ್ಮದ ಮೈನೋದ್ದೀನ್‌ ಪಟಲಿಕರ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಸಂಜೀವ ಚವ್ಹಾಣ ಇನ್ನಿತರರು ಭಾಗವಹಿಸಿದ್ದರು.

ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚವ್ಹಾಣ ಸ್ವಾಗತಿಸಿದರು. ಸಿದ್ದಾರೂಢ ವಂದಿಸಿದರು. ತಾಂಡಾದ ಮಹಿಳೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next