Advertisement
ಪಂ.ಪಂ. ಮೂಲಕ ಮೇಲುಸ್ತುವಾರಿಗೆ ಕ್ರಮಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಯಿತು. ಅದೇ ರೀತಿ ಶ್ಮಶಾನಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಮುಂದೆ ಸಮಸ್ಯೆಗಳಾಗುವ ಸಾಧ್ಯತೆ ಇರುವುದರಿಂದ ಗಮನಹರಿಸಬೇಕು ಎಂದು ಸದಸ್ಯ ಶ್ರೀನಿವಾಸ ಅಮೀನ್ ತಿಳಿಸಿದರು.
ಸರಕಾರದ ಅನುದಾನ ಬಳಸಿ ಅಭಿವೃದ್ಧಿಪಡಿಸಿದ ರಸ್ತೆಗಳು° ಅಫಿಡವಿಟ್ ಮೂಲಕ ಪ.ಪಂ.ಗೆ ಪಡೆದು ಸ್ಥಿರಾಸ್ಥಿ ರಿಜಿಸ್ಟ್ರಿಯಲ್ಲಿ ನೋಂದಾಯಿಸಬೇಕು. ಇಲ್ಲವಾದರೆ ಮುಂದೆ ಆ ರಸ್ತೆಯ ವಿಚಾರದಲ್ಲಿ ಸಮಸ್ಯೆಗಳು ಬಂದಾಗ ಇತ್ಯರ್ಥಪಡಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ವಾರ್ಡ್ ನಲ್ಲೂ ಇಂತಹ ರಸ್ತೆಗಳನ್ನು ಗುರುತಿಸಿ ರಿಜಿಸ್ಟ್ರಿಯಲ್ಲಿ ನೋಂದಾಯಿಸುವ ಕಾರ್ಯವಾಗಬೇಕು ಎಂದು ಸದಸ್ಯರು ತಿಳಿಸಿದರು. ಚರಂಡಿ ವ್ಯವಸ್ಥೆ
ಸರ್ವೀಸ್ ರಸ್ತೆ ನಿರ್ಮಾಣವಾಗುತ್ತಿರುವಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಆಗಬೇಕು. ಇಲ್ಲವಾದರೆ ದೇವಾಡಿಗರಬೆಟ್ಟು ಮುಂತಾದ ಕಡೆ ಮಳೆಗಾಲದಲ್ಲಿ ನೆರೆ ಉಂಟಾಗಲಿದೆ. ಈ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಸದಸ್ಯೆ ರತ್ನಾ ನಾಗರಾಜ್ ಗಾಣಿಗ ತಿಳಿಸಿದರು.
Related Articles
ಇತ್ತೀಚಿನ ಪ್ರಕರಣವೊಂದರಲ್ಲಿ ದೈವಸ್ಥಾನವೊಂದಕ್ಕೆ ಎನ್.ಒ.ಸಿ. ನೀಡಿ ಅನಂತರ ಕಾನೂನು ಪ್ರಕಾರ ಸರಿಯಿಲ್ಲ ಎಂದು ರದ್ದುಪಡಿಸಲಾಗಿದೆ. ಯಾವುದೇ ಎನ್.ಒ.ಸಿ. ನೀಡುವ ಮುನ್ನ ಆಲೋಚಿಸಿ ನೀಡಿ. ಮಾನವೀಯ ನೆಲೆಯಲ್ಲಿ ಕ್ರಮಕೈಗೊಳ್ಳಿ ಎಂದು ಸದಸ್ಯ ಶ್ಯಾಮ್‌ಸುಂದರ್ ನಾೖರಿ ತಿಳಿಸಿದರು. ಬಬ್ಬುಸ್ವಾಮಿ ದೇವಸ್ಥಾನಕ್ಕೆ ವಿದ್ಯುತ್ ಎನ್.ಒ.ಸಿ. ನೀಡುವಲ್ಲಿ ಸತಾಯಿಸುತ್ತಿರುವ ಕುರಿತು ಸದಸ್ಯ ರವೀಂದ್ರ ಕಾಮತ್ ಪ್ರಸ್ತಾವಿಸಿದರು.
Advertisement
ಉಪಾಧ್ಯಕ್ಷೆ ಅನಸೂಯಾ ಹೇಳೆì, ಸುಕನ್ಯಾ ಶೆಟ್ಟಿ, ರೇಖಾ ಕೇಶವ್, ಭಾಸ್ಕರ ಬಂಗೇರ, ಪುನೀತ್ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.
ಬಜೆಟ್ ಮಂಡನೆಅಧ್ಯಕ್ಷೆ ಸುಲತಾ ಹೆಗ್ಡೆಯವರು ಪ.ಪಂ. 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಚರ್ಚೆ ನಡೆಸಲು ಸೂಚಿಸಿದಾಗ, ಸಭೆಗೆ ಮೊದಲು ಬಜೆಟ್ ಪ್ರತಿ ಅವಲೋಕಿಸಲು, ಚರ್ಚೆಗೆ ಮುನ್ನ ಕಾಲಾವಕಾಶ ನೀಡಬೇಕೆಂದು ಸದಸ್ಯ ಶ್ಯಾಮ್‌ಸುಂದರ್ ನಾೖರಿ ತಿಳಿಸಿದರು. ಕಾರಂತ ಬೀದಿಯ ಅಭಿವೃದ್ಧಿಗಾಗಿ ಸರ್ವೆ ನಡೆಸುವ ಕುರಿತು ತೀರ್ಮಾನಿಸಲಾಯಿತು. ಸಾಲಿಗ್ರಾಮ ಮೀನುಮಾರುಕಟ್ಟೆ ಸಮಸ್ಯೆ ಬಗೆಹರಿಸಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. 3ನೇ ಸಭೆಯಲ್ಲಿ ಪ್ರಮಾಣ ವಚನ!
ಚೆಲ್ಲೆಮಕ್ಕಿ ವಾರ್ಡ್‌ಸದಸ್ಯೆ ಝಹಿರಾ ಅವರು ಕಳೆದ ಎರಡು ಸಭೆಗಳಿಗೆ ನಿರಂತರ ಗೈರಾಗಿದ್ದರು, ಪ್ರಮಾಣವಚನ ಸ್ವೀಕಾರಕ್ಕೂ ಆಗಮಿಸಿರಲಿಲ್ಲ. ಇದೀಗ ಮೂರನೇ ಸಭೆಯಲ್ಲಿ ಭಾಗವಹಿಸಿ ಪ್ರಮಾಣ ವಚನ ಸ್ವೀಕರಿಸಿದರು.