Advertisement

ಹೊಸ ವರ್ಷಾಚರಣೆ ತಡೆಗೆ ಮನವಿ

12:43 PM Dec 16, 2020 | Suhan S |

ಬೆಂಗಳೂರು: ಕೋವಿಡ್ ಸೋಂಕು ಭೀತಿ ಹಾಗೂ ವಿವಿಧ ನಗರಗಳಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿ ಆತಂಕದ ಹಿನ್ನೆಲೆಯಲ್ಲಿ ಡಿ.20ರಿಂದಲೇ ನಗರದ ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಶೇ.50ರಷ್ಟು ಜನ ಪಾಲ್ಗೊಳ್ಳುವುದಕ್ಕೆ ಸೀಮಿತ ಗೊಳಿಸುವಂತೆ ರಾಜ್ಯ ಸರ್ಕಾ ರಕ್ಕೆ ಶಿಫಾರಸು ಮಾಡಲಾಗಿದೆಎಂದು ಬಿಬಿಎಂಪಿ ಆಯುಕ್ತಎನ್‌.ಮಂಜುನಾಥ್‌ಪ್ರಸಾದ್‌ ತಿಳಿಸಿದರು.

Advertisement

ಈಸಂಬಂಧ ಮಂಗಳವಾರ ಮಾತನಾಡಿದ ಆಯುಕ್ತರು, ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಹೆಚ್ಚು ಜನ ಸೇರುತ್ತಾರೆ. ಈ ವರ್ಷ ಇದಕ್ಕೆ ಅವಕಾಶ ನೀಡದೆ ಇರಲು ನಿರ್ಧರಿಸಲಾಗಿದೆ. ಕೋವಿಡ್‌ ತಡೆ ತಾಂತ್ರಿಕ ಸಮಿತಿಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ನಗರದಲ್ಲಿ ಸಾಮಾನ್ಯವಾಗಿ ಡಿ.20ರಿಂದಲೇ ಸಂಭ್ರಮಾಚರಣೆ ಪ್ರಾರಂಭವಾಗುತ್ತವೆ.ಹೀಗಾಗಿ, ಮುಂಜಾಗ್ರತೆ ವಹಿಸಲಾಗುವುದು. ಈ ಸಂದರ್ಭದಲ್ಲಿ ಕೋವಿಡ್‌ ನಿಯಮ ಪಾಲನೆ ಬಗ್ಗೆ ಎಚ್ಚರ ವಹಿಸಲು ಹೆಚ್ಚುವರಿ 200 ಜನ ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಅದ್ಧೂರಿ ನಿಷೇಧಕ್ಕೆ ಮನವಿ: ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ವಿಠಲ್‌ ಮಲ್ಯ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌ ಸೇರಿ ಇನ್ನಿತರ ಕಡೆ ಸಾರ್ವಜನಿಕವಾಗಿ ಅದ್ದೂರಿ ಕಾರ್ಯಕ್ರಮ ನಿಷೇಧಿಸುವ ಸಂಬಂಧ ಸರ್ಕಾರವನ್ನು ಕೋರಲಾಗಿದೆ ಎಂದು ಹೇಳಿದರು.

ಶೀಘ್ರದಲ್ಲಿಯೇ ಅಂತಿಮ ಅಧಿಸೂಚನೆ: ಈ ಬಗ್ಗೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು. ಹೋಟೆಲ್‌, ರೆಸ್ಟೋರೆಂಟ್‌ ಸೇರಿ ಜನನಿಬಿಡ ಪ್ರದೇಶಗಳಲ್ಲಿ ನಿಯಮ ಪಾಲನೆಬಗ್ಗೆ ಪೊಲೀಸ್‌ ಸಿಬ್ಬಂದಿ,ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್‌ಗ‌ಳು ನಿಗಾ ವಹಿಸಲಿದ್ದಾರೆಂದರು.

ಬಿಬಿಎಂಪಿಯಿಂದ ಸರ್ಕಾರಕ್ಕೆ ಶಿಫಾರಸು :

  • ಕೋವಿಡ್ ಭೀತಿ ಹಿನ್ನೆಲೆ ಈ ಬಾರಿ ಅದ್ಧೂರಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶ ಬೇಡ.
  • ಪಬ್‌, ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿ, ಕ್ಲಬ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನೆ ಕಾರ್ಯಕ್ರಮಕ್ಕೆ ನಿರ್ಬಂಧ.
  • ಹೋಟೆಲ್‌, ಕ್ಲಬ್‌-ಪಬ್‌, ರೆಸ್ಟೋರೆಂಟ್‌ಗಳಲ್ಲಿ ಸದ್ಯ ಜಾರಿಯಲ್ಲಿರುವ ಕೋವಿಡ್ ಸೋಂಕಿನ ಮಾರ್ಗಸೂಚಿಯಂತೆ ಒಟ್ಟು ಆಸನಗಳ ಪೈಕಿ ಶೇ.50 ಜನಕ್ಕೆ ಮಾತ್ರ ಅವಕಾಶ. ದೊಡ್ಡ ಸಭಾಂಗಣಗಳಿದ್ದರೆ 200 ಜನರಿಗೆ ಸೀಮಿತ.
  • ಹೊಸ ವರ್ಷಾಚರಣೆ ವೇಳೆ ಸ್ಯಾನಿಟೈಸರ್‌, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ.
Advertisement
Advertisement

Udayavani is now on Telegram. Click here to join our channel and stay updated with the latest news.

Next