Advertisement

ಜಮೀನಿಗೆ ಹಕ್ಕು ಪತ್ರ ನೀಡಲು ಒತ್ತಾಯ

07:39 PM Oct 09, 2020 | Suhan S |

ಸಾಗರ: ತಾಲೂಕಿನ ಕಸಬಾ ಹೋಬಳಿ ಪಡವಗೋಡು ಗ್ರಾಪಂ ವ್ಯಾಪ್ತಿಯ ಹಳವಗೋಡು ಗ್ರಾಮದ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ತಾಲೂಕು ಯುವ ಒಕ್ಕೂಟದ ವತಿಯಿಂದ ಗುರುವಾರ ತಾವು ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕುಪತ್ರನೀಡುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿಜಿಲ್ಲಾ ಧಿಕಾರಿಗಳು ಹಾಗೂ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಭಾರಂಗಿ ಹೋಬಳಿ ಹೆಬ್ಬೂರು ಮತ್ತು ಮಲವಳ್ಳಿ, ಬನಗೋಡಿ ಹಾಗೂ ಇಂಡುವಳ್ಳಿ ಗ್ರಾಮದಲ್ಲಿ ನಾವು ವಾಸವಾಗಿದ್ದೆವು.ನಮ್ಮ ಜಮೀನು ಹಿರೇಭಾಸ್ಕರ ನಂತರ ಶರಾವತಿ ವಿದ್ಯುತ್‌ ಯೋಜನೆಯಿಂದಎರಡು ಬಾರಿ ಮುಳುಗಡೆಯಾಗಿದೆ. ಆ ಸಂದರ್ಭದಲ್ಲಿ ನಮಗೆ ಸಾಗರ ತಾಲೂಕಿನ ಪಡವಗೋಡು ಗ್ರಾಪಂವ್ಯಾಪ್ತಿಯ ಹಳವಗೋಡು ಗ್ರಾಮದಲ್ಲಿಜಮೀನು ಸಾಗುವಳಿ ಮಾಡಿಕೊಳ್ಳಲುಸರ್ಕಾರ ಅವಕಾಶ ಮಾಡಿಕೊಟ್ಟಿತ್ತು ಎಂದು ತಿಳಿಸಲಾಗಿದೆ.

1959ರಿಂದ ನಾವು ಹಳವಗೋಡು ಗ್ರಾಮದ ಸರ್ವೇ ನಂ. 12ರಲ್ಲಿ 19 ಕುಟುಂಬಗಳು ಸುಮಾರು 52 ಎಕರೆಜಮೀನು ಸಾಗುವಳಿ ಮಾಡಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದೇವೆ.1995-96ರಲ್ಲಿ ನಮ್ಮ ಜಮೀನುಗಳನ್ನು ಅರಣ್ಯಭೂಮಿಯೆಂದು ಪರಿವರ್ತನೆ ಮಾಡಲಾಗಿದೆ. ಇದರಿಂದ ನಾವು ತೀವ್ರ ಸಂಕಷ್ಟಕ್ಕೆ ಒಳಗಾಗುವಂತೆ ಆಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ರಾಜ್ಯಕ್ಕೆ ಬೆಳಕು ನೀಡಲು ನಮ್ಮಮನೆ, ಆಸ್ತಿ, ಜಮೀನು ಕಳೆದುಕೊಂಡು ಒಂದರ್ಥದಲ್ಲಿ ನಮ್ಮ ಬದುಕುನಿರಾಶ್ರಿತವಾಗಿದೆ. ಸರ್ಕಾರವೇ ನಮ್ಮನ್ನು ಮುಳುಗಡೆ ಸಂತ್ರಸ್ತರು ಎಂದುಪುನರ್ವಸತಿ ಕಲ್ಪಿಸಿದ ಜಾಗವನ್ನು ಅರಣ್ಯಇಲಾಖೆಗೆ ಸೇರಿಸಿ ಈತನಕ ಹಕ್ಕುಪತ್ರ ನೀಡದೆ ಇರುವುದು ಬಹಳ ನೋವಿನ ಸಂಗತಿ. ಹಳವಗೋಡು ಗ್ರಾಮದ ಸರ್ವೇ ನಂ. 12ರಲ್ಲಿ ವಾಸವಿರುವ 19 ಕುಟುಂಬಗಳು ಸಾಗುವಳಿ ಮಾಡಿಕೊಂಡು ಬಂದಿರುವ 52 ಎಕರೆಜಮೀನನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಲಾಗಿದೆ. ಪ್ರಗತಿಪರ ಯುವ ಒಕ್ಕೂಟದ ತಾಲೂಕು ಅಧ್ಯಕ್ಷ ರಮೇಶ್‌ ಈ. ಕೆಳದಿ, ಮುಳುಗಡೆಸಂತ್ರಸ್ತರಾದ ಅಶೋಕ್‌, ಮಹಾಬಲೇಶ್‌, ಕನ್ನಪ್ಪ, ಗಿರೀಶ್‌, ಉಮೇಶ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next