Advertisement

ನಗರಸಭೆ ವ್ಯಾಪ್ತಿಯ ಮನೆ ಮನೆ ಕಸ ವಿಲೇವಾರಿ ಸಮರ್ಪಕಗೊಳಿಸಲು ಮನವಿ

05:12 PM Jan 17, 2018 | Team Udayavani |

ನಗರ: ನಗರಸಭೆಯ ವತಿಯಿಂದ ನಡೆಸಲಾಗುತ್ತಿರುವ ಮನೆ ಮನೆ ಕಸ ವಿಲೇವಾರಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು ನಗರಸಭೆಗೆ ಸೂಚನೆ ನೀಡುವಂತೆ ಶ್ರೀ ರಾಮಕೃಷ್ಣ ಮಿಷನ್‌ ಸ್ವಚ್ಛ ಪುತ್ತೂರು ಘಟಕವು ಪುತ್ತೂರು ಸಹಾಯಕ ಕಮಿಷನರ್‌ಗೆ ಮನವಿ ಮಾಡಿದೆ.

Advertisement

2017-18ನೇ ಸಾಲಿನಲ್ಲಿ ನಗರಸಭೆಯ ಬೇರೆ ಬೇರೆ ವ್ಯಾಪ್ತಿಯಲ್ಲಿ ಸ್ವಚ್ಛ ಪುತ್ತೂರು ಅಭಿಯಾನದ ಭಾಗವಾಗಿ 180ಕ್ಕೂ ಹೆಚ್ಚಿನ ಸದಸ್ಯರ ತಂಡ ಸ್ವಚ್ಛತೆ ಕಾರ್ಯ ನಡೆಸುತ್ತಿದೆ. ಆದರೆ ತಂಡ ಸ್ವಚ್ಛ  ಮಾಡಿದ ಕೆಲವೇ ಕ್ಷಣಗಳಲ್ಲಿ ಆ ಭಾಗದ ಜನರು ಮನೆಯಿಂದ ಕಸ ಅಥವಾ ತ್ಯಾಜ್ಯಗಳನ್ನು ರಸ್ತೆಯ ಬದಿಯಲ್ಲಿ ತಂದು ಹಾಕುತ್ತಿದ್ದಾರೆ. ಕಾರಣ ಕೇಳಿದಾಗ ನಗರಸಭೆಯ ವತಿಯಿಂದ ಮನೆ ಮನೆ ಕಸ ವಿಲೇವಾರಿಗೆ ಬರುತ್ತಿಲ್ಲ ಎನ್ನುವ ಆರೋಪ ಮಾಡುತ್ತಿದ್ದಾರೆ.

ಪ್ರತಿಭಟನೆ ನಡೆಸುವ ಎಚ್ಚರಿಕೆ
ನಗರದಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಅನುಸರಿಸಿದ್ದಲ್ಲಿ ಸ್ವಚ್ಛ  ಪುತ್ತೂರು ತಂಡದಿಂದ ನಗರಸಭೆಯ ಎದುರು ಕಸವನ್ನು ಹಾಕಿ ನಗರಸಭೆಯ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವ ಸ್ವತ್ಛ ಪುತ್ತೂರು ಘಟಕವು, ಈ ನಿಟ್ಟಿನಲ್ಲಿ ನಗರಸಭೆಗೆ ಸೂಚನೆ ನೀಡುವಂತೆ ಎಸಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದೆ.

ಮನವಿ ನೀಡುವ ಸಂದರ್ಭ ರಾಮಕೃಷ್ಣ ಮಿಷನ್‌ ಸ್ವಚ್ಛ ಪುತ್ತೂರು ಘಟಕದ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ,
ದಿನೇಶ್‌ ಜೈನ್‌ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಸ ಸಂಗ್ರಹ: ಸಮರ್ಪಕ ನಿರ್ವಹಣೆ ಅಗತ್ಯ
ನಗರಸಭೆ ಆಡಳಿತವು ಕಸ ಸಂಗ್ರಹಕ್ಕೆ ಸಂಬಂಧಿಸಿದಂತೆ ಹಣ ಸಂಗ್ರಹ ಮಾಡಿ ಕಸ ಕೊಂಡೊಯ್ಯಲು ವಾರ ಕಳೆದರೂ ಬರುತ್ತಿಲ್ಲ. ಕೆಲವೊಮ್ಮೆ ಹೊತ್ತಲ್ಲದ ಹೊತ್ತಿನಲ್ಲಿ ಬರುತ್ತಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಇದೆ. ತತ್‌ಕ್ಷಣ ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next