Advertisement
ಭಾರತ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ. ಈ ವಸ್ತುಗಳು ಒಳ ಬರಲಾರಂಭಿಸಿದರೆ ನಮ್ಮ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ ಬೆಳೆಗಾರರ ಹಿತಕ್ಕೆ ಹಾನಿಯಾಗಲಿದೆ. ಆದ್ದರಿಂದ ತಾವು ಈ ಬಗ್ಗೆ ತತ್‌ಕÒಣ ಗಮನ ಹರಿಸಿ ಮ್ಯಾನ್ಮಾರ್ ಗಡಿಯಲ್ಲಿನ ಮಣಿಪುರ ಗೇಟುಗಳ ಮೂಲಕ ಅಡಿಕೆ ಮತ್ತು ಕಾಳುಮೆಣಸು ಒಳನುಸುಳಿ ದೇಶೀಯ ಮಾರುಕಟ್ಟೆ ಪ್ರವೇಶಿಸದಂತೆ ನಿರ್ಬಂಧಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕೊಡ್ಗಿ ಅವರು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ಮತ್ತು ಈಶಾನ್ಯ ರಾಜ್ಯಗಳ ಬೇಡಿಕೆಯಂತೆ ನೆರೆಯ ದೇಶಗಳ ಜತೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ(ಬಿಎಂ ವಿಭಾಗ) ಮೇ 20ರಂದು ಹೊರಡಿಸಿರುವ ಅಧಿಸೂಚನೆಯಡಿ ಮಣಿಪುರದ ಮೊರೇಹ್‌ನ ಐಸಿಪಿಯಲ್ಲಿನ ಗೇಟ್ ನಂ. 1 ಮತ್ತು 2ನ್ನು ತೆರೆಯಲು ಸೂಚಿಸಿದೆ. 2020ರಿಂದ ಈ ಗೇಟುಗಳನ್ನು ಬಂದ್ ಮಾಡಲಾಗಿತ್ತು. ಈ ಕ್ರಮದಿಂದ ಒಟ್ಟಾರೆ ವ್ಯಾಪಾರ ವಹಿವಾಟಿಗೆ ಉತ್ತೇಜನ ಲಭಿಸಿದ್ದರೂ ಅಡಿಕೆ ಮತ್ತು ಕಾಳು ಮೆಣಸು ಕೂಡ ಈ ಮಾರ್ಗದಲ್ಲಿ ಒಳನುಸುಳಲು ಆರಂಭವಾಗಿರುವುದು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ವಿದೇಶಾಂಗ ಸಚಿವರ ಗಮನ ಸೆಳೆದಿದೆ.
Related Articles
Advertisement
ಇದೀಗ ಅಡಿಕೆ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಅಡಿಕೆ ಕಿಲೋಗೆ ಉತ್ಪಾದನಾ ವೆಚ್ಚ 360 ರೂ.ಗೂ ಅಧಿಕವಾಗಿದೆ. ಆದ್ದರಿಂದ ಈ ಗರಿಷ್ಠ ಮೊತ್ತವನ್ನು ಆಮದು ಮೇಲೆ ನಿಗದಿಪಡಿಸಬೇಕು ಎಂದು ಕೊಡ್ಗಿ ತಿಳಿಸಿದ್ದಾರೆ.