Advertisement
ಇಲ್ಲಿನ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ಯವರೆಗೆ ಪ್ರತಿ ಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಧಿಕ್ಕಾರದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರರಿಗೆ ಲಿಖೀತ ಮನವಿ ಸಲ್ಲಿಸಿದವಿದ್ಯಾರ್ಥಿಗಳು ಐಟಿಐ ನ ಎಸ್‌ಸಿವಿಟಿ ಪರೀಕ್ಷೆಯನ್ನು ಜಗಳೂರಿನಲ್ಲಿ ನಡೆಸಬೇಕು. ಕೂಡಲೇ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾಲೂಕಾಧ್ಯಕ್ಷ ಮಧು ದೇವಿಕೆರೆ ಮಾತನಾಡಿ, ಪ್ರತಿ ವರ್ಷ ನಡೆಯುವ ಎಸ್‌ಸಿವಿಟಿ ಪರೀಕ್ಷೆಯನ್ನು ದಾವಣಗೆರೆಗೆ ಹೋಗಿ ಬರೆಯಬೇಕು. ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬರುವುದರಿಂದ ಎರಡು ತಾಸುಗಳು ಪ್ರಯಾಣ ಮಾಡಬೇಕು. ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡಬೇಕಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅ ಧಿಕಾರಿಗಳು ಗಮನಹರಿಸಿ ಜಗಳೂರಿನಲ್ಲಿ ಪರೀಕ್ಷಾ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.
ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪರೀಕ್ಷಾ ಕೇಂದ್ರ ರದ್ದುಪಡಿಸಿರುವುದು ಎಷ್ಟರ ಮಟ್ಟಿಗೆ
ಸರಿ. ಜಗಳೂರಿನಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು. ನಕಲು ಮಾಡಲು ಪ್ರೋತ್ಸಾಹಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ತಾಲೂಕಾಧ್ಯಕ್ಷ ಗೌರಿಪುರ ಮೈಲೇಶ್, ಎಐಎಸ್‌ಎಫ್ ಉಪಾಧ್ಯಕ್ಷ ರವಿಕುಮಾರ ದೊಡ್ಡಬೊಮ್ಮನಹಳ್ಳಿ, ಕಾರ್ಯದರ್ಶಿ ಪವನ್, ಸಹಕಾರ್ಯದರ್ಶಿ ಯುವರಾಜ್ ಎಚ್.ಎಂ ಹೊಳೆ ಮತ್ತಿತರಿದ್ದರು.