Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಪಡಿಸಲು ಆಗ್ರಹ

04:59 AM Jun 13, 2020 | Lakshmi GovindaRaj |

ಚಾಮರಾಜನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ನಗರದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿ ಭಟನೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದ ದ್ವಾರದಲ್ಲಿ ಪ್ರತಿಭಟಿಸಿದ  ಕಾರ್ಯಕರ್ತರು ರಾಜ್ಯ ಸರ್ಕಾರದ, ಶಿಕ್ಷಣ ಸಚಿವರ ವಿರುದಟಛಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತ ನಾಡಿ, ದೇಶ, ರಾಜ್ಯದಲ್ಲಿ  ದಿನ  ದಿಂದ ದಿನಕ್ಕೆ ಕೋವಿಡ್‌ 19 ಸೋಂಕು  ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ, ಶಿಕ್ಷಣ ಸಚಿವರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಧೋರಣೆ ತಳೆದಿರುವುದು ಸರಿಯಲ್ಲ ಎಂದರು. ಈಗಾಗಲೇ ಒಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕೋವಿಡ್‌ 19  ಕಾಣಿಸಿಕೊಂಡಿದೆ.

ರಾಜ್ಯದಲ್ಲಿ 9 ಲಕ್ಷ ವಿದ್ಯಾರ್ಥಿಗಳಿದ್ದಾರೆ. 2 ಲಕ್ಷ ಶಿಕ್ಷಕರು ಹಾಗೂ ಇತರರು ಸೇರಿ ಒಟ್ಟು ಪರೀಕ್ಷೆ ಪಕ್ರಿಯೆಯಲ್ಲಿ 13 ಲಕ್ಷ ಮಂದಿ ಭಾಗವಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೋವಿಡ್‌ 19 ಸೋಂಕು ವಿದ್ಯಾರ್ಥಿಗಳಿಗೆ  ಹರಡುವ ಸಾಧ್ಯತೆ ಇದ್ದು, ಪರೀಕ್ಷೆ ರದ್ದುಪಡಿಸುವು ದೇ ಸೂಕ್ತ. ಇಲ್ಲದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಾ. ಮುರಳಿ, ಚಾ. ವೆಂ. ರಾಜ್‌ಗೊಪಾಲ್‌, ಚಾ.ಸೋಮನಾಯಕ, ನಿಜಧ್ವನಿ  ಗೋವಿಂದ ರಾಜು, ಚಾ.ರಾ.ಕುಮಾರ್‌, ಆಟೋ ಮಹದೇವಸ್ವಾಮಿ, ದೊರೆ, ತಾಂಡ ವಮೂರ್ತಿ, ರಾಜಶೇಖರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next