Advertisement

ಸಮಯ ಬದಲಿಗೆ ತುಳುಕೂಟ ಮನವಿ

05:38 AM Jan 02, 2019 | Team Udayavani |

ಮಂಗಳೂರು : ಮಂಗಳೂರು-ಕುವೈಟ್‌-ಮಂಗಳೂರು ನಡುವೆ ಸಂಚರಿಸುತ್ತಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಒತ್ತಾಯಿಸಿ ತುಳುಕೂಟ ಕುವೈಟ್‌ನ ಅಧ್ಯಕ್ಷ ರಮೇಶ್‌ ಶೇಖರ್‌ ಭಂಡಾರಿ ಹಾಗೂ ಮಾಜಿ ಅಧ್ಯಕ್ಷ ವಿಲ್ಸನ್‌ ಡಿ’ಸೋಜಾ ಅವರು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಕುವೈಟ್‌ ವಿಭಾಗದ ದೇಶೀಯ ಮುಖ್ಯಸ್ಥ ಹರ್‌ಜೀತ್‌ ಸಾಹ್ನೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

Advertisement

ಮಂಗಳೂರು-ಕುವೈಟ್‌-ಮಂಗಳೂರು ನಡುವೆ ವಾರಕ್ಕೆ ಮೂರು ಬಾರಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಚರಿಸುತ್ತದೆ. ಈ ಹಿಂದೆ ಮಂಗಳವಾರ, ಗುರುವಾರ, ಶನಿವಾರ ಮಂಗಳೂರಿನಿಂದ ರಾತ್ರಿ 8.45ಕ್ಕೆ ಹೊರಟು 11.45ಕ್ಕೆ ಕುವೈಟ್‌ ತಲುಪುತ್ತಿತ್ತು. ಅಲ್ಲಿಂದ ತಡರಾತ್ರಿ 12.30ಕ್ಕೆ ಹೊರಟು ಮರುದಿನ ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪುತ್ತಿತ್ತು. ಆದರೆ ಈಗ ಅದೇ ದಿನಗಳಲ್ಲಿ ಬೆಳಗ್ಗೆ 7ಕ್ಕೆ ಮಂಗಳೂರಿನಿಂದ ಹೊರಟು ಬೆಳಗ್ಗೆ 11.15ಕ್ಕೆ ಕುವೈಟ್‌ಗೆ ಹಾಗೂ ಕುವೈಟ್‌ನಿಂದ ಅಪರಾಹ್ನ 12.15ಕ್ಕೆ ಮಂಗಳೂರಿನತ್ತ ಹೊರಡುತ್ತಿದೆ. ಈ ಸಮಯವು ಉದ್ಯೋಗಿಗಳಿಗೆ ಅನನುಕೂಲವಾಗಿದ್ದು, ಕೇವಲ ಪ್ರಯಾಣಕ್ಕೆ ಎರಡು ದಿನಗಳ ರಜೆ ವ್ಯರ್ಥವಾಗುತ್ತಿದೆ. ಹೀಗಾಗಿ ವೇಳಾಪಟ್ಟಿಯನ್ನು ಬದಲಿಸಿ ಹಿಂದಿನ ಸಮಯದ ಪ್ರಕಾರವೇ ಹಾರಾಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ.

ಈ ಬೇಡಿಕೆ ಬಗ್ಗೆ ಸಂಬಂಧಪಟ್ಟ ಏರ್‌ ಇಂಡಿಯಾದ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಹರ್‌ ಜೀತ್‌ ಸಾಹ್ನೆ ಭರವಸೆ ನೀಡಿದರು.

ಈ ಮನವಿ ಪತ್ರ ಸಲ್ಲಿಕೆಯಲ್ಲಿ ತುಳುಕೂಟ ಕುವೈಟ್‌ ಜತೆ ಕುವೈಟ್‌ನಲ್ಲಿರುವ ಕರಾವಳಿ ಕರ್ನಾಟಕದ ಇತರ ಸಂಘ ಸಂಸ್ಥೆಗಳಾದ ಬಂಟರ ಸಂಘ, ಕನ್ನಡ ಕೂಟ, ಬಿಲ್ಲವ ಸಂಘ, ಜಿಎಸ್‌ಬಿ ಸಭಾ, ಕೆನರಾ ವೆಲ್ಫೇರ್‌ ಅಸೋಸಿಯೇಶನ್‌, ಪಾಂಗ್ಲಾ ಅಸೋಸಿಯೇಶನ್‌, ಕೆಕೆಎಂಎ ಕರ್ನಾಟಕ ವಿಭಾಗ, ಯುನೈಟೆಡ್‌ ಮ್ಯಾಂಗಲೋರಿಯನ್ಸ್‌, ಪಂಬೂರು ವೆಲ್ಫೇರ್‌ ಅಸೋಸಿಯೇಶನ್‌, ಕಣಜಾರ್‌ ವೆಲ್ಫೇರ್‌ ಅಸೋಸಿಯೇಶನ್‌, ಶಿರ್ವ ವೆಲ್ಫೇರ್‌ ಅಸೋಸಿಯೇಶನ್‌, ಆ್ಯಗ್ನೇಸಿಯನ್‌ ಅಲುಮ್ನಿ ಕುವೈಟ್‌, ಮೊಗವೀರ್ಅ ಸೋಸಿಯೇಶನ್‌, ಸೈಂಟ್‌ ಅಲೋಶಿಯಸ್‌ ಕಾಲೇಜು ಅಲುಮ್ನಿ ಅಸೋಸಿಯೇಶನ್‌, ಬೆಳ್ಳೆ ವಿಶನ್‌, ಕುಂದಾಪುರ್‌ ವರಾಡೊ ವೆಲ್ಫೇರ್‌ ಅಸೋಸಿಯೇಶನ್‌, ಬ್ರಹ್ಮಾವರ್‌ ವೆಲ್ಫೇರ್‌ ಅಸೋಸಿಯೇಶನ್‌, ರಾಮಕ್ಷತ್ರಿಯ ಸಂಘಗಳು ಸಹಕರಿಸಿವೆ ಎಂದು ಮಂಗಳೂರು ಮೂಲದ ಕುವೈಟ್‌ ನಿವಾಸಿ ಮೋಹನ್‌ದಾಸ್‌ ಕಾಮತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next