Advertisement

ಕಬ್ಬಿನ ಹಿಂಬಾಕಿಗೆ ಆಗ್ರಹಿಸಿ ರೈತರಿಂದ ಜಿಲ್ಲಾಡಳಿತಕ್ಕೆ ಮನವಿ

11:33 AM Jul 26, 2017 | |

ವಿಜಯಪುರ: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ ಮುದ್ದೇಬಿಹಾಳ ತಾಲೂಕಿನ ರೈತರಿಗೆ ಬಾಕಿ ಹಣ ನೀಡುವಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ತಾರತಮ್ಯ ಮಾಡುತ್ತಿದ್ದಾರೆ. ಕೂಡಲೇ ಎಲ್ಲ ರೈತರಿಗೆ ಸಮಾನವಾಗಿ ಹಿಂಬಾಕಿ ನೀಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ರೈತರು ಮನವಿ ಸಲ್ಲಿಸಿದರು.

Advertisement

ಅಪರ ಜಿಲ್ಲಾಧಿಕಾರಿ ಎಚ್‌.ಎಸ್‌. ಬೂದೆಪ್ಪ ಅವರಿಗೆ ಮನವಿ ಸಲ್ಲಿಸಿದ ರೈತರು, ಮುದ್ದೇಬಿಹಾಳ ತಾಲೂಕಿನ ಕಾಶಿನಕುಂಟೆ, ಯಲಗೂರು, ಯಲ್ಲಮ್ಮನ ಬೂದಿಹಾಳ, ಬಳಬಟ್ಟಿ, ವಡವಡಗಿ, ಹೊಳೆಮಸೂತಿ ಇನ್ನುಳಿದ ಹಲವಾರು ಗ್ರಾಮಗಳ ಕಬ್ಬು ಬೆಳೆದ ರೈತರು 2016ನೇ ಸಾಲಿನಲ್ಲಿ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಣೆ ಮಾಡಿದ್ದಾರೆ. ಆದರೆ ಈವರೆಗೆ ಕಬ್ಬು ಸಾಗಿಸಿದ ರೈತರಿಗೆ ಬಿಲ್‌ ಪಾವತಿ ಮಾಡಿಲ್ಲ. ಭೀಕರ ಬರದ ಮಧ್ಯೆಯೂ ರೈತರು ಬೆಳೆದ ಕಬ್ಬಿಗೆ ಬಿಲ್‌ ಪಾವತಿಸುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು. 

ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಹಿಂಬಾಕಿ ಪಾವತಿ, ಬೆಂಬಲ ಬೆಲೆ ನೀಡಿಕೆ ಸೇರಿದಂತೆ ಕಬ್ಬು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು, ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಿಲ್ಲಾ ಸಂಚಾಲಕ ಗೌಡಪ್ಪಗೌಡ ಮೈಗೂರ, ಡಾ| ಎಂ. ರಾಮಚಂದ್ರ
ಬೊಮ್ಮನಜ್ಯೋಗಿ, ಸಿದ್ರಾಯ ಜಂಗಮಶೆಟ್ಟಿ ಬಸವ್ವ ಮಾದರ, ನಬಿಸಾಬ ನಂದನೂರ, ಶಿವಮೂರ್ತೆಪ್ಪ ಕಾಮನಕೇರಿ, ಶಿವರಾಯಪ್ಪ ಕಾಮನಕೇರಿ, ಯಲಗೂರದಪ್ಪ ಕಂದಗನೂರ, ಕೆಂಚಪ್ಪ ಮಾದರ, ಬಸಪ್ಪ ಮಾದರ, ದೋಂಡಿಬಾ ಪವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next