ಮುಂಬಡ್ತಿ ಕೈಬಿಡುವಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 75ಕ್ಕೂ ಹೆಚ್ಚು
ಪಿಎಸ್‌ಐ ಹಾಗೂ ಎಸ್‌ಐ ಗಳು ಸೋಮವಾರ ಸಿಎಂಗೆ ಮನವಿ ಸಲ್ಲಿಸಿದರು.
Advertisement
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪಿಎಸ್‌ಐ ಹಾಗೂ ಎಸ್‌ಐಗಳು ಇಲಾಖೆಯಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಅಷ್ಟರೊಳಗೆ ತಮ್ಮ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಿ ಎಂದು ಮನವಿ ಸಲ್ಲಿಸಿದರು. ಬಿ.ಕೆ. ಪವಿತ್ರಾ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ಆದರೂ, ಇದೇ ಪ್ರಕರಣದ ಕಾರಣ ಹೇಳಿ ಕಳೆದ 2 ವರ್ಷಗಳಿಂದ ನಮ್ಮ ಮುಂಬಡ್ತಿ ತಡೆ ಹಿಡಿಯಲಾಗಿದೆ. ಈ ಮಧ್ಯೆ ಬೇರೆ ಇಲಾಖೆಗಳಲ್ಲಿ ಮುಂಬಡ್ತಿ, ಪದೋನ್ನತಿ ನೀಡಲಾಗಿದೆ. ಆದರೆ, ನಮ್ಮ ಇಲಾಖೆಯಲ್ಲಿ ಮಾತ್ರ ತಡೆ ಹಿಡಿಯಲಾಗಿದೆ. ಸಾಮಾನ್ಯ ವರ್ಗಾವಣೆ ಆರಂಭಗೊಂಡರೆ ನಮಗೆ ಅನ್ಯಾಯವಾಗುತ್ತದೆ. ಆದ್ದರಿಂದ ವರ್ಗಾವಣೆ ಸಂದರ್ಭದಲ್ಲಿ ಸೇವಾ ಜೇಷ್ಠತೆ ಅನುಸಾರ ನಮಗೆ ಸಿಪಿಐ ಹುದ್ದೆಗಳಿಗೆ ಬಡ್ತಿ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪಿಎಸ್‌ಐಯೊಬ್ಬರು “ಉದಯವಾಣಿ’ಗೆ ಹೇಳಿದರು.