Advertisement

ಪಿಂಕ್‌ ಆಟೋ ಖರೀದಿಗೆ ಮನವಿ

08:26 PM Mar 24, 2021 | Girisha |

ವಿಜಯಪುರ: ಮಹಿಳೆಯರ ಸ್ವಾವಲಂಬನೆ ಉದ್ಯೋಗಕ್ಕಾಗಿ ಮಹಿಳಾ ಆಟೋ ಚಾಲನೆಗಾಗಿ ನಗರದಲ್ಲಿ ಪಿಂಕ್‌ ಆಟೋ ಖರೀದಿಗೆ ಅವಕಾಶ ಕಲ್ಪಿಸಬೇಕು ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಈ ಕುರಿತು ಆರ್‌ಟಿಒ ಕಚೇರಿಯಲ್ಲಿ ಅಧಿ ಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸುಜಾತಾ ಕಳ್ಳಿಮನಿ, ಮಹಿಳಾ ಚಾಲಕರ ಕೋರಿಕೆಯಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಆರ್‌ಟಿಒ, ಪಿಂಕ್‌ ಆಟೋ ಖರೀದಿಸಲು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.

ಪ್ರಾದೇಶಿಕ ಸಾರಿಗೆ ಅಧಿ ಕಾರಿಗಳೊಂದಿಗೆ ಚರ್ಚಿಸಿ ಆಟೋ ಖರೀದಿಸಲು ಅನುಮತಿಸಲು ನಿರ್ಧರಿಸಲಾಗುತ್ತದೆ. ಜಿಲ್ಲಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾದೇಶಿಕ ರಸ್ತೆ ಪ್ರಾ  ಧಿಕಾರದ ಸಭೆಯಲ್ಲಿ ಸದರಿ ವಿಷಯ ಪ್ರಸ್ತಾಪಿಸಿ ಒಪ್ಪಿಗೆ ಪಡೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ಜಿಪಂ ಅಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next