Advertisement

ಪ್ರತಿಭಟನೆಗೆ ರಜೆ ಕೋರಿ ಮನವಿ

07:29 AM Feb 17, 2019 | Team Udayavani |

ಹೊನ್ನಾಳಿ: ಪಂಚಾಯತ್‌ ರಾಜ್‌ ಇಲಾಖೆಯ ಮಲತಾಯಿ ಧೋರಣೆ ಖಂಡಿಸಿ ರಾಜ್ಯ ಗ್ರಾಪಂ ಕ್ಲರ್ಕ್‌ ಮತ್ತು ಡಾಟಾ ಆಪರೇಟರ್‌ ಗಳ ಕೇಮಾಭಿವೃದ್ಧಿ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ರಜೆ ನೀಡಿ ನಮ್ಮ ಪ್ರತಿಭಟನೆಗೆ ಪರೋಕ್ಷವಾಗಿ ಬೆಂಬಲಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ತಾಲೂಕು ಗ್ರಾಪಂ ಕ್ಲರ್ಕ್‌ ಮತ್ತು ಡಾಟಾ ಆಪರೇಟರ್‌ಗಳ ಕೇಮಾಭಿವೃದ್ಧಿ ಸಂಘದ ಸದಸ್ಯರು ಶನಿವಾರ ಮನವಿ ಸಲ್ಲಿಸಿದರು.

Advertisement

ಮನವಿ ಸಲ್ಲಿಸಿ ಮಾತನಾಡಿದ ಸಂಘದ ಸದಸ್ಯ ಬಿ.ಪಿ.ರಾಜ್‌ಕುಮಾರ್‌, ಫೆ. 18ರ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲಾ ಗ್ರಾಪಂ ಕ್ಲರ್ಕ್‌ ಮತ್ತು ಡಾಟಾ ಆಪರೇಟರ್‌ಗಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಲು ಸಂಘದ ಸದಸ್ಯರು ತೆರಳಲಿದ್ದಾರೆ. ಆದ್ದರಿಂದ ರಜೆ ಮತ್ತು ಅನುಮತಿಗಾಗಿ ತಾಪಂ ಇಒಗೆ ಮನವಿ ಸಲ್ಲಿಸಲಾಗಿದೆ ಎಂದರು.
 
ಕುಳಗಟ್ಟೆ ರವಿ ಮಾತನಾಡಿ, ಅತ್ಯಂತ ಕಡಿಮೆ ವೇತನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸುಮಾರು 15-18 ಯೋಜನೆಗಳ ಕೆಲಸಗಳನ್ನು ನಾವು ಪ್ರತಿನಿತ್ಯ ನಿರ್ವಹಿಸುತ್ತಿದ್ದೇವೆ. ಜೊತೆಗೆ ಗ್ರಾಪಂ ನ ಇತರ ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಮ್ಮ ಪರಿಶ್ರಮಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ ಎಂದರು.

ಗ್ರಾಪಂ ಕ್ಲರ್ಕ್‌ ಮತ್ತು ಡಾಟಾ ಆಪರೇಟರ್‌ಗಳಾದ ಹರಳಹಳ್ಳಿ ಗಣೇಶ್‌, ರುದ್ರಮ್ಮ, ಮಂಜುಳಮ್ಮ, ರವಿ, ಹರೀಶ್‌ ಸಾಸ್ವೆಹಳ್ಳಿ, ರಾಜು ಚಟ್ನಹಳ್ಳಿ, ಮಂಜನಾಯ್ಕ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next