Advertisement

ಬದುಕು ರೂಪಿಸಲು ಸಹಾಯಕ್ಕೆ ಮನವಿ

10:14 PM Jan 24, 2018 | Team Udayavani |

ಉಡುಪಿ: ಕುಟುಂಬಕ್ಕೆ ಆಸರೆಯಾಗಬೇಕೆಂದು ಭಾರೀ ಕನಸು ಹೊತ್ತುಕೊಂಡು ಕಾಲೇಜು ಕಲಿಯುತ್ತಿದ್ದ 18ರ ಹರೆಯದ ಯುವಕ ಅಪಘಾತಕ್ಕೆ ತುತ್ತಾಗಿ ಕಾಲನ್ನೇ ಕಳೆದುಕೊಂಡಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಮುಂದಕ್ಕೆ ಚಿಕಿತ್ಸೆಯೊಂದಿಗೆ ಕೃತಕ ಕಾಲು ಕೂಡ ಜೋಡಣೆ ಮಾಡಬೇಕಾಗಿದ್ದು, ಮನೆಮಂದಿ ಸಾರ್ವಜನಿಕ ಸಹಾಯ ಯಾಚಿಸಿದ್ದಾರೆ.

Advertisement

ಬ್ರಹ್ಮಾವರದ ಆಟೋರಿಕ್ಷಾ ಚಾಲಕ ಚಾಂತಾರು ಗ್ರಾಮದ ಅಂಗಡಿಬೆಟ್ಟುವಿನ ಪಾಂಡುರಂಗ ನಾಯಕ್‌ ಅವರ ಪುತ್ರ
ಪ್ರಶಾಂತ್‌ ಅವರು ಕಾಲು ಕಳೆದುಕೊಂಡ ಯುವಕ. ಅವರು ಕಡಿಯಾಳಿಯ ಇಂದಿರಾ ಶಿವರಾವ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ವಿಭಾಗದಲ್ಲಿ  ಕಲಿಯುತ್ತಿದ್ದರು.

ಘಟನೆಯ ಹಿನ್ನೆಲೆ
ಸ್ನೇಹಿತನ ಬೈಕಿನಲ್ಲಿ ಪೇಟೆ ಕಡೆಗೆ ಹೋಗು ತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿ ಬೈಕ್‌ ಪಲ್ಟಿಯಾಗಿತ್ತು. ಸವಾರ ದೂರಕ್ಕೆ ಎಸೆಯ ಲ್ಪಟ್ಟರೆ, ಸಹಸವಾರನಾಗಿದ್ದ ಪ್ರಶಾಂತ ಬೈಕಿನಡಿ ಸಿಲುಕಿ ಕಾಲಿಗೆ ಗಂಭೀರ ಸ್ವರೂಪದ ಪೆಟ್ಟಾಗಿತ್ತು.

ಮಣಿಪಾಲದಲ್ಲಿ ಚಿಕಿತ್ಸೆ
ಮಣಿಪಾಲದ ಕೆಎಂಸಿಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ ಪ್ರಶಾಂತನ ಕಾಲಿನ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಡಕಾಲಿನ ರಕ್ತನಾಳಕ್ಕೆ ಗಂಭೀರವಾಗಿ ಪೆಟ್ಟಾಗಿದ್ದ ಕಾರಣ ಮೊಣಗಂಟಿನಿಂದ ಕೆಳಗಿನ ಕಾಲನ್ನೇ ಕಟ್‌ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಮೊಣಗಂಟಿನಿಂದ ಕೆಳಗಿನ ಎಡಕಾಲು ಕತ್ತರಿಸಲಾಗಿದೆ.

ಶಸ್ತ್ರಚಿಕಿತ್ಸೆ , ಕೃತಕ ಕಾಲು ಜೋಡಣೆ
ಶಸ್ತ್ರಚಿಕಿತ್ಸೆಗೆ ಭಾರೀ ಹಣ ಖರ್ಚಾಗಿದ್ದು, ಕೃತಕ ಕಾಲಿನ ಜೋಡಣೆ ಹಾಗೂ ಮುಂದಿನ ವೈದ್ಯಕೀಯ ವೆಚ್ಚಕ್ಕೆ ಲಕ್ಷಾಂತರ ರೂ, ವ್ಯಯವಾಗಲಿದ್ದು , ಹೆತ್ತವರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮುಂದಿನ ವಿದ್ಯಾಭ್ಯಾಸದ ಕುರಿತು ಕಾಲೇಜಿನ ಪ್ರಾಂಶುಪಾಲರು ಮಾನವೀಯ ಸ್ಪಂದನೆ ನೀಡಿದ್ದಾರೆ ಎಂದು ಯುವಕನ ತಂದೆ ತಿಳಿಸಿದ್ದಾರೆ.

Advertisement

ಆರ್ಥಿಕ ಸಹಾಯ ಮಾಡಿ
ಇನ್ನೂ ಹದಿಹರೆಯದ ವಯಸ್ಸಿನಲ್ಲಿರುವ ಪ್ರಶಾಂತನ ಭವಿಷ್ಯ ರೂಪಣೆ ಸದ್ಯ ಸಮಾಜದ ದಾನಿಗಳ ಕೈಯಲ್ಲಿದೆ. ಸಹೃದಯೀ, ಮಾನವೀಯ ಮನಸ್ಸುಳ್ಳ ದಾನಿಗಳು ಸ್ಪಂದಿಸಿ ಹಣಕಾಸಿನ ಸಹಾಯವನ್ನು ಯುವಕನಿಗೆ ಮಾಡಬೇಕಿದೆ. ಸಹಾಯ ಮಾಡಲಿಚ್ಛಿಸುವ ಮಾನವೀಯ ದಾನಿಗಳು ಸಿಂಡಿಕೇಟ್‌ ಬ್ಯಾಂಕಿನ ಬ್ರಹ್ಮಾವರ ಶಾಖೆಯಲ್ಲಿರುವ ಪ್ರಶಾಂತ್‌ ಅವರ ಉಳಿತಾಯ ಖಾತೆಗೆ (01122210027744) ಹಣ ಜಮೆ ಮಾಡಬಹುದು. ಬ್ಯಾಂಕ್‌ನ ಐಎಫ್ಎಸ್‌ಸಿ ಕೋಡ್‌-SYNB0000112. ನೇರವಾಗಿ ಸಂಪರ್ಕಿಸಲು ಇಚ್ಛಿಸುವವರು ಪ್ರಶಾಂತನ ತಂದೆ ಪಾಂಡುರಂಗ ನಾಯಕ್‌ ಅವರ ಮೊಬೈಲ್‌ ಸಂಖ್ಯೆಯನ್ನು  (9448770285) ಸಂಪರ್ಕಿಸಿ ಸಹಾಯ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next