Advertisement

ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಮನವಿ

03:52 PM Dec 11, 2021 | Team Udayavani |

ದೇವದುರ್ಗ: ಗ್ರಾಮೀಣ ಭಾಗದ ರೈತರು ಹಿಸ್ಸಾ ರದ್ದತಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಬೇಕು. ಸ್ಥಳೀಯ ಕಚೇರಿಯಲ್ಲೇ ಹಿಸ್ಸಾ ರದ್ದತಿ ಇತ್ಯರ್ಥ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ ತಾಲೂಕು ಸಮಿತಿ ಪದಾಧಿಕಾರಿಗಳು ಶುಕ್ರವಾರ ಭೂ ದಾಖಲೆಗಳ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

Advertisement

ಗ್ರಾಮೀಣ ಭಾಗದ ರೈತರು ಹಿಸ್ಸಾ ರದ್ದಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಲು ಆಗದೇ ಇದ್ದರಿಂದ ಇಂತಹ ಸಮಸ್ಯೆ ತಾಲೂಕು ಕಚೇರಿಯಲ್ಲಿ ಬಗೆಹರಿಸಲು ಅನುಕೂಲಂತೆ ಮಾಡಿಕೊಳ್ಳಬೇಕು. ತಿಂಗಳಗಟ್ಟಲೇ ಕಚೇರಿಗೆ ಅಲೆದರೂ ಸಕಾಲಕ್ಕೆ ಕಡತಗಳು ವಿಲೇವಾರಿ ಆಗದೇ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಹಿಸ್ಸಾ ರದ್ದು ಭೂ ದಾಖಲೆಗಳ ಕಚೇರಿಯಲ್ಲಿ ಅವಕಾಶ ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಕಲಾ ಮಂಡಳಿ ರಾಜ್ಯ ಸಂಚಾಲಕ ಹೈದರ ಅಲಿ ಪಲಕನಮರಡಿ, ಜಿಲ್ಲಾ ಸಂಚಾಲಕ ಮಲ್ಲಿರ್ಕಾಜನ ಜೋಂಡೆ, ಬೂದೆಪ್ಪ ಕ್ಯಾದಿಗಿ, ನರಸಪ್ಪ ಗಣೇಕಲ್‌, ಆಂಜನೇಯ್ಯ, ಶಿವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next