Advertisement

ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕ ವಿತರಣೆಗೆ ಆಗ್ರಹ

05:36 PM Dec 19, 2021 | Team Udayavani |

ಮುದಗಲ್ಲ: ಪಟ್ಟಣ ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿಯ ಎಸ್‌ ಸಿ,ಎಸ್‌ಟಿ ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಪಂನ ಶೇ.75 ಅನುದಾನದಲ್ಲಿ ಪಠ್ಯ-ಪುಸ್ತಕ ವಿತರಿಸುವಂತೆ ಆಗ್ರಹಿಸಿ ತಲೇಖಾನ ಗ್ರಾಮದ ವಿದ್ಯಾರ್ಥಿಗಳು ಶನಿವಾರ ಗ್ರಾಪಂ ಕಾರ್ಯಾಲಯ ಎದುರು ಧರಣಿ ನಡೆಸಿದರು.

Advertisement

ಎರಡು-ಮೂರು ತಿಂಗಳ ಹಿಂದೆ ಕಾಲೇಜುಗಳು ಆರಂಭವಾಗಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಗ್ರಾಪಂ ವತಿಯಿಂದ ಪಠ್ಯ-ಪುಸ್ತಕಗಳನ್ನು ವಿತರಿಸಲಾಗಿತ್ತು. ಆದರೆ ಪ್ರಸ್ತಕ ಸಾಲಿನಲ್ಲಿ ಇವತ್ತು, ನಾಳೆ ಎಂದು ಹೇಳುತ್ತಿದ್ದ ಗ್ರಾಪಂ ಅಧಿಕಾರಿಗಳು ಈಗ ಗ್ರಾಪಂ ವತಿಯಿಂದ ಪಠ್ಯ ವಿತರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳಾದ ದ್ಯಾವಣ್ಣ, ಸೋಮಣ್ಣ, ಆಂಜನಯ್ಯ, ಹನುಮಂತ ನಾಯಕ, ರಮೇಶ, ಅಮರೇಶ, ಗುಂಡಪ್ಪ, ಹೊಳಿಯಪ್ಪ, ಯಮನೂರ, ಶಿವಕುಮಾರ, ನಾಗಪ್ಪ, ಶಿವಪ್ಪ, ಬಸಲಿಂಗಪ್ಪ, ಬಸವರಾಜ, ದೇವರಾಜ, ನಿಂಗಪ್ಪ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next