Advertisement
ಬಂಟ್ವಾಳ ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಅವರು ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿ, ಗ್ರಾ.ಪಂ.ನ ಅಭಿವೃದ್ಧಿ ಕಾರ್ಯಗಳಿಗೆ ಅಭಿನಂದನೆ ಸಲ್ಲಿಸಿದರು. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸ್ಥರು ಗ್ರಾಮಸಭೆಗಳಲ್ಲಿ ಭಾಗವಹಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. 2016-17ನೇ ಆರ್ಥಿಕ ವರ್ಷದಲ್ಲಿ ಶೇ. ನೂರು ಕರ ಸಂಗ್ರಹಕ್ಕೆ ಸಹಕರಿಸಿದ ಗ್ರಾಮಸ್ಥರನ್ನು, ನಯನಾಡು ಪರಿಸರಕ್ಕೆ ಕುಡಿಯುವ ನೀರು ಒದಗಿಸಿದ ಉದ್ಯಮಿ ಹರೀಂದ್ರ ಪೈ ಅವರನ್ನು ಅಭಿನಂದಿಸಿದರು.
ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತನ್ನ ಅನುದಾನದಿಂದ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಜಿಲ್ಲಾ ಪಂಚಾಯತ್‌ನಿಂದ ದೊರಕುವ ಅನುದಾನಗಳನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿನಿಯೋಗಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಪುಂಜಾಲಕಟ್ಟೆ ಪ್ರಾ. ಆ. ಕೇಂದ್ರ ಆಯುಷ್ ವೈದ್ಯಾಧಿಕಾರಿ ಡಾ| ಸೋಹನ್ ಕುಮಾರ್ ಎನ್. ಮಾಹಿತಿ ನೀಡಿ ಮಾತನಾಡಿ ಮಳೆಗಾಲದ ಸಾಂಕ್ರಾಮಿಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಸಕಾಲದಲ್ಲಿ ಸರಿಯಾದ ಔಷಧ ಪಡೆದುಕೊಳ್ಳಬೇಕು ಎಂದರು. ಗ್ರಾಮಸ್ಥರ ಪರ ರಾಜೇಂದ್ರ ಕೆ.ವಿ., ಮೋಹನ್ ಸಾಲ್ಯಾನ್ ಅವರು ಅಭಿವೃದ್ಧಿ ಕಾರ್ಯಗಳ ವಿವರ ಕೇಳಿದರು. ಇದೇ ವೇಳೆ 2017-18ನೇ ಸಾಲಿನ ವಸತಿ ಯೋಜನೆ, ನಿವೇಶನ, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳ ಪಟ್ಟಿ ಮಾಡಲಾಯಿತು.
Related Articles
Advertisement