Advertisement

ಸೇವಾ ಭದ್ರತೆಗೆ ಆಗ್ರಹಿಸಿ ಮನವಿ

07:15 PM Oct 09, 2020 | Suhan S |

ಹೂವಿನಹಡಗಲಿ: ಸರಕಾರ ಜಾರಿಗೆ ತಂದಿರುವ ಸ್ವಾಮಿತ್ವ ಯೋಜನೆಕೆಲಸದಿಂದ ನಮ್ಮನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಪರವಾನಗಿ ಭೂಮಾಪಕರ ಸಂಘ ಹಡಗಲಿ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಹಂಸಕುಮಾರಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಅಧ್ಯಕ್ಷರಾದ ಎಂ ತಿಪ್ಪಾನಾಯ್ಕ ಮಾತನಾಡಿ ಸ್ವಾಮಿತ್ವ ಯೋಜನೆ ಅಡಿ ಪರವಾನಗಿ ಭೂ ಮಾಪಕರನ್ನು ನಿಯೋಜಿಸಿಕೊಳ್ಳುತ್ತಾರೆ ಆದರೆ ನಮಗೆಯಾವುದೇ ರೀತಿಯ ತರಬೇತಿ ಮತ್ತು ಸೂಕ್ತ ಮಾರ್ಗದರ್ಶನ ನಮಗೆ ನೀಡಿಲ್ಲ. ಇದುವರೆಗೂ ಪರವಾನಗಿ ಭೂ ಮಾಪಕರಿಗೆ ಸೇವಾಭದ್ರತೆ ಒದಗಿಸಿಲ್ಲ. ನಮ್ಮ ರಾಜ್ಯ ಮಂಡಳಿಯೊಂದಿಗೆ ಚರ್ಚಿಸದೆ ಏಕಾಏಕಿ ಯೋಜನೆಯನ್ನು ಜಾರಿಗೆ ತಂದು ನಮ್ಮನ್ನುನಿಯೋಜಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ರಾಜ್ಯ ಸಂಘದ ಕರೆ ಮೇರೆಗೆ ತಾಲೂಕು ಸಂಘವು ಸರಕಾರಕೂಡಲೇ ಈ ಯೋಜನೆಯಿಂದ ನಮ್ಮನ್ನು ಕೈಬಿಡಬೇಕೆಂದು ಒತ್ತಾಯಿಸುತ್ತದೆ ಎಂದರು.

ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಇಲಾಖೆಯಲ್ಲಿಸೇವಾ ಭದ್ರತೆ ಇಲ್ಲ. ಸರಕಾರದಯೋಜನೆಗಳಾದ ದರಕಾಸ ಪೋಡಿ, ಕೆರೆ ಅಳತೆ, ಪೋಡಿ ಮುಕ್ತ ಅಭಿಯಾನಯೋಜನೆ ಸೇರಿದಂತೆ ಭೂ ಮಾಪನಕೆಲಸ ಕಾರ್ಯಗಳಿಗೆ ನಮ್ಮಿಂದ ಕೆಲಸ ತೆಗೆದುಕೊಂಡು ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ.

ನಮ್ಮ ಸೇವೆಯನ್ನು ಈ ಕೂಡಲೇ ಕಾಯಂಗೊಳಿಸಬೇಕೆಂದು ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ಸರಕಾರಕ್ಕೆಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎಂ. ತಿಪ್ಪಾನಾಯ್ಕ,ಪದಾಧಿಕಾರಿಗಳಾದ ಗೋಪಿನಾಥ, ಚಂದ್ರುಶೇಖರ, ಸಂತೋಷ,ಡಾಕ್ಯಾನಾಯ್ಕ, ಶಿವಕುಮಾರನಾಯ್ಕ, ಜಗದೀಶ ಎನ್‌, ಸೊಮಶೇಖರ, ಜ್ಯೋತಿನಾಯ್ಕ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next