Advertisement

ಕಸಾಪಗೆ ಕಚೇರಿ ಕಲ್ಪಿಸಲು ಮನವಿ

01:05 PM Aug 25, 2020 | Team Udayavani |

ಗುಂಡ್ಲುಪೇಟೆ: ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಸಿ.ಎಸ್‌. ನಿರಂಜನಕುಮಾರ್‌ ಅವರನ್ನು ಸನ್ಮಾನಿಸಿ, ತಾಲೂಕು ಸಾಹಿತ್ಯ ಪರಿಷತ್ತಿಗೆ ಕಚೇರಿ ಕಲ್ಪಿಸಲು ಮನವಿ ಸಲ್ಲಿಸಿದರು.

Advertisement

ಪಟ್ಟಣದ ಶಾಸಕರ ಕಚೇರಿಯಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್‌.ವಿನಯ್‌, ತಾಲೂಕು ಅಧ್ಯಕ್ಷ ವೀ.ನಾ.ಚಿದಾನಂದಸ್ವಾಮಿ ಕೇರಳ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ತಾಲೂಕಿನಲ್ಲಿ ಕಸಾಪ ತಾಲೂಕು ಘಟಕ ಕಚೇರಿ ನಿರ್ಮಾಣಕ್ಕೆ 4 ಗುಂಟೆ ಸ್ಥಳ ಮೀಸರಿರಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡ ಬೇಕು. ತಾಪಂ ಆವರಣದಲ್ಲಿದ್ದ ಹಳೆಯ ಕಟ್ಟಡ ಶಿಥಿಲವಾಗಿ ನೆಲಕ್ಕುರುಳಿದ್ದರಿಂದ ಕಚೇರಿಯೇ ಇಲ್ಲದಂತಾಗಿದೆ. ಆದ್ದರಿಂದ ತಾತ್ಕಾಲಿಕವಾಗಿ ಕಚೇರಿ ನಡೆಸಲು ಸರ್ಕಾರಿ ಕಟ್ಟಡದಲ್ಲಿ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಶಾಸಕರು, ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ.ಶಿವಮೂರ್ತಿ ಅವರಿಗೆ ಕರೆ ಮಾಡಿ, ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಯಾವುದಾದರೂ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಯನ್ನು ಕಸಾಪ ಕಚೇರಿಗೆ ನೀಡುವಂತೆ ಸೂಚನೆ ನೀಡಿದರು. ಕಸಾಪ ಜಿಲ್ಲಾ ಕಾರ್ಯದರ್ಶಿ ವೀರಭದ್ರಸ್ವಾಮಿ, ಶರಣ ಸಾಹಿತ್ಯ ಪರಿಷತ್‌ನ ಕೊಂಗರಹಳ್ಳಿ ನಾಗರಾಜು, ಆರ್‌.ಎಂ.ಸ್ವಾಮಿ, ಕೋಶಾಧಿಕಾರಿ ಬಿ.ಎಂ.ಪ್ರಭುಸ್ವಾಮಿ ಹಾಜರಿದ್ದರು.

………………………………………………………………………………………………………………………………………………..

ಕಾರ್ಖಾನೆ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಗೆ ಮನವಿ : ಕೊಳ್ಳೇಗಾಲ: ಪಟ್ಟಣದ ರಾಜೀವ್‌ ನಗರ ಬಡವಾಣೆಯ 2ನೇ ಅಡ್ಡ ರಸ್ತೆಯಲ್ಲಿ ಜನ ವಾಸಿಸುವ ಪ್ರದೇಶದಲ್ಲಿ ಮರ ಕತ್ತರಿಸುವ ಮಿಲ್ಲು ಮತ್ತು ಕಬ್ಬಿಣದ ಇಂಜಿನಿಯರಿಂಗ್‌ ಕೆಲಸ ನಡೆಯುತ್ತಿದ್ದು, ಕೂಡಲೇ ಕಾರ್ಖಾನೆ ಸ್ಥಳಾಂತರ ಮಾಡಬೇಕು ಎಂದು ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Advertisement

ರಾಜೀವ್‌ ನಗರ ಬಡವಾಣೆಯ 2ನೇ ಅಡ್ಡ ರಸ್ತೆಯ ನಿವಾಸಿಗಳಾದ ಕೆಂಪೇಗೌಡ, ಸಿದ್ದಲಿಂಗಾಚಾರ್‌, ನಂಜಪ್ಪ, ಮಹಾದೇವ, ಅಬ್ದೂಲ್‌ ನೂರ್‌, ಬಾಬು, ಗಿರೀಶ್‌ ಸೇರಿದಂತೆ ಇತರರು ಜಿಲ್ಲಾಧಿಕಾರಿಗಳಿಗೆ ಮನವಿಸಲಿಸಿದ್ದಾರೆ.

ಮಂಜುನಾಥ್‌ ಎಂಬುವವರಿಗೆ ಸೇರಿದ 2 ಅಂಗಡಿಗಳು ತಲೆ ಎತ್ತಿರುವುದರಿಂದ ಬಡಾವಣೆಯಲ್ಲಿ ವಿವಿಧ ರೋಗಿಗಳಿಗೆ ಮತ್ತು ಜನರಿಗೆ ಮರದ ಮಿಲ್ಲು ಮತ್ತು ಕಬ್ಬಿಣದ ಕಾರ್ಖಾನೆಯಿಂದ ಬರುವ ಶಬ್ದಗಿಳಿಂದ ತೊಂದರೆಯಾಗುತ್ತಿದೆ. ಕಾರ್ಖಾನೆಯನ್ನು ಸ್ಥಳಾಂತರ ಮಾಡುವ ಮೂಲಕ ಜನರ ಆರೋಗ್ಯ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಆರ್‌ ರವಿ ಮನವಿ ಸ್ವೀಕರಿಸಿದ್ದು, ಕೂಡಲೇ ನಗರಸಭೆಯ ಪೌರಾಯುಕ್ತರು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next